ಕೆಲಸಕ್ಕೆ ಬಾರದಂತಾಗಿದೆ ಸುಸಜ್ಜಿತ ಶೌಚಾಲಯ…!!

ಹೊಸದುರ್ಗ

         ಬಯಲು ಶೌಚ ಮುಕ್ತ ಭಾರತಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವಕಾಶ ಇದ್ದಲ್ಲೆಲ್ಲ ಉಚಿತ ಶೌಚಾಲಯ ನಿರ್ಮಿಸಿ ಅನುಕೂಲ ಮಾಡಿಕೊಡುತ್ತಿದೆ ಆದರೆ ಹೊಸದುರ್ಗದ ತಾಲ್ಲೂಕು ಕಛೇರಿಯ ಸಾರ್ವಜನಿಕರ ಶೌಚಾಲಯದ ಅವ್ಯವಸ್ಥೆ ನೋಡಿದರೆ ತಾಲ್ಲೂಕು ಆಡಳಿತ ನಿದ್ರೆಸುತ್ತಿದೆಯಾ ಎಂದು ಅನುಮಾನ ಕಾಡುತ್ತಿದೆ.

            ಇತ್ತಿಚ್ಚೇಗೆ ನಮ್ಮ ತಾಲ್ಲೂಕಿಗೆ ರಾಜ್ಯ ಮಟ್ಟದಲ್ಲಿ ಸ್ವಚ್ಚ ತಾಲ್ಲೂಕು ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಆದರೆ ಪಟ್ಟಣದ ಮಧ್ಯೆ ಭಾಗದಲ್ಲಿರುವ ತಾಲ್ಲೂಕು ಕಛೇರಿ ಸಾರ್ವಜನಿಕರ ಶೌಚಾಲಯ ಸ್ವಚ್ಚತೆ ಕಾಣದೇ ಇರುವುದು ದುರದುಷ್ಠಕರ. ಇದನ್ನು ಕಂಡು ನಮ್ಮ ರೈತ ಮಿತ್ರರು ಹಾಗೂ ಸಾರ್ವಜನಿಕರು ಕೆಲವೊಮ್ಮೆ ಆಕ್ರೋಶವನ್ನು ವ್ಯಕ್ತಪಡಿಸಿದರು.

           ತಾಲ್ಲೂಕು ಕಚೇರಿ ಹಿಂಭಾಗದಲ್ಲಿರುವ ಪುರುಷರು-ಮಹಿಳೆಯರ ಸಾರ್ವಜನಿಕ ಶೌಚಾಲಯ ಬಳಕೆಗೆ ಯೋಗ್ಯವಲ್ಲದಂತಾಗಿದ್ದು ಅದರ ದುಃಸ್ಥಿತಿ ಕಂಡು ಕಛೇರಿಗೆ ಭೇಟಿ ನೀಡುವ ಸಾರ್ವಜನಿಕರು ಅಸಹ್ಯ ಪಟ್ಟುಕೊಂಡು ಅಲ್ಲಿ ಮೂತ್ರ ವಿಸರ್ಜನೆ ಮಾಡದೆ ಹಿಂತಿರುಗುವ ಸ್ಥಿತಿ ನಿರ್ಮಾಣವಾಗಿದೆ.

           ತಾಲ್ಲುಕು ಕಛೇರಿ ಸಿಬ್ಬಂದಿಗಳ ಕೊಠಡಿಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಮೂತ್ರಾಲಯ ಮತ್ತು ಶೌಚಾಲಯವಿದ್ದು ಅಲ್ಲಿಗೆ ನಲ್ಲಿಯ ನೀರಿನ ಸಂಪರ್ಕವೇ ಇಲ್ಲ. ಕೆಲವು ¸ಂದರ್ಭಗಳಲ್ಲಿ ಸಾರ್ವಜನಿಕರು ಶೌಚಾಲಯವಿದ್ದರೂ ಹೊರಗಡೆ ಹೋಗುವುದನ್ನು ಕಾಣಬಹುದಾಗಿದೆ.

           ಇನ್ನು ಕಛೇರಿ ಸಿಬ್ಬಂದಿಗಾಗಿ ಒಳಗಡೆ ಇರುವ ಶೌಚಾಲಯ ಕೂಡ ಶುಚಿತ್ವವಾಗಿಟ್ಟುಕೊಳ್ಳದೆ ಗಬ್ಬುನಾಥ ಬೀರುತ್ತಿದೆ. ಶೌಚಾಲಯದ ಬಾಗಿಲುಗಳಿಗೆ ಅಳವಡಿಸಿರುವ ಪ್ಲಾಸ್ಟಿಕ್ ಬಾಗಿಲುಗಳು ಹಾಳಾಗಿರುವುದು ಒಂದಡೆಯಾದರೆ ಶೌಚಾಲಯವನ್ನು ಬೀರುತ್ತಿದ್ದರೂ ಶೌಚಾಲಯದ ಸಮೀಪದಲ್ಲಿಯೇ ಇರುವ ಸಿಬ್ಬಂದಿಗಳು ಗಮನಹರಿಸದಿರುವುದು ದುರ್ದೈವವೆನಿಸಿದೆ.

           ತಾಲ್ಲೂಕು ಕಛೇರಿ ವಾರದ ರಜೆ ಹೊರತುಪಡಿಸಿ ನಿತ್ಯ ಸುಮಾರು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಬಂದು ಹೋಗುತ್ತಿದ್ದು ಅವರಿಗೆಲ್ಲ ಶೌಚಲಯವೇ ಇಲ್ಲವಾಗಿದೆ. ಸ್ವಚ್ಚ ಭಾರತದ ಬಗ್ಗೆ ಪ್ರಚಾರಾಂದೋಲನ ನಡೆಸುವ ಪುರಸಭೆಯಲ್ಲಿ ಶೌಚಾಲಯದ ಸ್ಥಿತಿ ಹೀಗಾದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ.ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೊಠಡಿಯ ಒಳಗಿರುವ ಶೌಚಾಲಯವನ್ನು ಬಳಕೆ ಮಾಡುತ್ತಿದ್ದು ನಾಗರೀಕರ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಇನ್ನಾದರೂ ತಾಲ್ಲೂಕು ಆಡಳಿತ ಜನಪ್ರತಿನಿಧಿಗಳ ಬಗ್ಗೆ ಎಚ್ಚೇತ್ತುಕೊಳ್ಳುತ್ತದೆಯಾ ಕಾದು ನೋಡಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link