ಶಾಲೆಯ ಬೀರು ಬೀಗ ಒಡೆದು ದಾಖಲಾತಿಗಳ ಎರಚಾಟ

ಕೊರಟಗೆರೆ

       ಸರ್ಕಾರಿ ಶಾಲೆಯೊಂದರ ಹೊರಬಾಗಿಲು ಒಡೆಯದೆ ಶಾಲೆಯ ದಾಖಲಾತಿಗಳಿರುವ ಬೀರುವಿನ ಬಾಗಿಲು ಒಡೆದು ದಾಖಲಾತಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿರುವ ಘಟನೆಯೊಂದು ತಾಲ್ಲೂಕಿನ ತೀತಾ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

      ತೀತಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಇದೇ ಶಾಲೆಗೆ ಹೊಂದಿಕೊಂಡಂತಿರುವ ಖಾಸಗಿ ಸಹಭಾಗಿತ್ವದ ವಾಣಿ ಪ್ರೌಢಶಾಲೆ ಎರಡರಲ್ಲೂ ಶಾಲೆಯ ಕಚೆರಿಗಳ ಹೊರಬೀಗ ಒಡೆಯದೆ ಶಾಲಾ ದಾಖಲಾತಿಗಳಿರುವ ಬೀರುಗಳನ್ನು ಒಡೆದು ಕೆಲವು ದಾಖಲಾತಿಗಳನ್ನು ಎರಚಾಡಿರುವ ಘಟನೆ ಜರುಗಿರುವುದು ಶಾಲಾ ಪೋಷಕರಲ್ಲಿ ಆತಂಕ ಮೂಡಿಸಿದೆ.

        ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಶಾಲಾ ಅಭಿವೃದ್ದಿ ಸಮಿತಿ ಹಾಗೂ ಶಿಕ್ಷಕರುಗಳ ನಡುವೆ ಸಾಮರಸ್ಯ ಇಲ್ಲದೆ, ಸಣ್ಣಪಟ್ಟ ವಿಚಾರದಲ್ಲಿ ಇಬ್ಬರಲ್ಲೂ ಒಮ್ಮತ ಮೂಡದೆ ಶಾಲಾ ಅಭಿವೃದ್ದಿ ಸಹ ಕುಂಠಿತವಾಗಿತ್ತು. ಇತ್ತೀಚೆಗೆ ಶಾಲೆಯ ಕೆಲವು ವ್ಯವಹಾರಗಳ ಬಗ್ಗೆ ಎಸ್.ಡಿ.ಎಂ.ಸಿ ಹಾಗೂ ಪೋಷಕರಿಂದ ಆರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವೊಂದು ದಾಖಲಾತಿ ತಿರುಚುವ ಸಲುವಾಗಿ ಬೀರು ಒಡೆಯುವ ಪ್ರಕರಣಕ್ಕೆ ಕೈ ಹಾಕಿರಬಹುದು ಎಂದು ಸಾರ್ವಜನಿಕರಿಂದ ಅನುಮಾನ ವ್ಯಕ್ತವಾಗುತ್ತಿದೆ

         ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಣ ದುರುಪಯೋಗ ಮತ್ತು ಕೆಲವೊಂದು ಸಮಸ್ಯೆಗಳ ಬಗ್ಗೆ ಆರೋಪ ಕೇಳಿಬಂದಿದ್ದು, ಅಕ್ಷರದಾಸೋಹದಲ್ಲಿ 150 ಕೆ.ಜಿ ಬೇಳೆ ಕಳೆದ 6 ತಿಂಗಳಿನಿಂದಲೂ ಉಳಿಸಿಕೊಂಡು ಬಂದಿದ್ದು, ಈಗ ಆ ಬೇಳೆಗೆ ಹುಳು ಬಿದ್ದಿವೆ. ಮುಖ್ಯೋಪಾಧ್ಯಾಯರು, ಶಾಲಾ ಅಭಿವೃದ್ದಿ ಕಮಿಟಿ ಮತ್ತು ಪೋಷಕರ ನಡುವೆ ಸಾಮರಸ್ಯದ ಕೊರತೆಯಿಂದ ಶಾಲೆಯಲ್ಲಿ ಒಂದಷ್ಟು ಹಗರಣ ಬೆಳಕಿಗೆ ಬಂದ ಕಾರಣ, ಈ ಎರಡೂ ಶಾಲೆಗಳ ಬಾಗಿಲ ಬೀಗ ಒಡೆಯದೆ ಬೀರುವಿನ ಬೀಗ ಒಡೆದು ಕೆಲವೊಂದು ದಾಖಲಾತಿಗಳನ್ನು ತಿರುಚುವ ಕೆಲಸವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಅನುಮಾನಗಳು ವ್ಯಕ್ತವಾಗುತ್ತಿದೆ.

          ತೀತಾ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಬದಲಾಗಿದ್ದು, ನೂತನ ಅಧ್ಯಕ್ಷರಿರುವಾಗಲೆ ಹಳೆಯ ಅಧ್ಯಕ್ಷರನ್ನು ಬಳಸಿಕೊಂಡು ಇಲ್ಲಿನ ಮುಖ್ಯೋಪಾಧ್ಯಾಯರು 25 ಸಾವಿರ ರೂ.ಗಳ ಚೆಕ್‍ಗೆ ಸಹಿ ಹಾಕಿಸಿಕೊಳ್ಳಲಾಗಿದೆ ಮತ್ತು ಬ್ಯಾಂಕ್ ಖಾತೆಯಲ್ಲಿನ 10 ಸಾವಿರ ರೂ., ಶಾಲಾ ಕಟ್ಟಡ ನಿರ್ಮಾಣ ಹಾಗೂ ದುರಸ್ಥಿಯಲ್ಲಿ ಹಣ ದುರುಪಯೋಗವಾಗಿದೆ. ಜೊತೆಗೆ ಸ್ಪೋಟ್ರ್ಸ್ ವಿಭಾಗದಲ್ಲಿ 5 ಸಾವಿರ ರೂ. ದುರುಪಯೋಗ, ದಾಸೋಹಕ್ಕೆ ಸಂಬಂಧಿಸಿದಂತೆ ಕೆಲವೊಂದು ಆರೋಪಗಳು ಇಲ್ಲಿನ ಮುಖ್ಯೋಪಾಧ್ಯಾಯರ ವಿರುದ್ದ ಸಾರ್ವಜನಿಕರಿಂದ ಅನುಮಾನ, ಅಸಮಾಧಾನ ವ್ಯಕ್ತವಾಗುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link