ಗುತ್ತಲ :
ಇಂದಿನ ಆಧುನಿಕ ಜನರಲ್ಲಿ ಹಣದ ಮೇಲಿನ ವ್ಯಾಮೋಹ ಸ್ಮಶಾನವನ್ನು ಮರೆತಂತೆ ಕಾಣುತಿಲಾ.ಇದಕ್ಕೆ ಒಂದು ನೈಜ ಉದಾಹರಣೆಯೇ ಗುತ್ತಲ ಪಟ್ಟಣ ಪಂಚಾಯತಿಯಲ್ಲಿ ಸ್ಮಶಾನದ ಅಭಿವೃದ್ಧಿಗೆ ಮಂಜೂರಾದ ಹಣ ಮಾಯವಾದದ್ದು. ಮನುಷ್ಯ ಜೀವಂತ ಇದ್ದಾಗ ಹಣ ಹಣ ಎಂದು ಹಗಲು ರಾತ್ರಿ ಎನ್ನದೇ ದುಡಿಯುತ್ತಾನೆ ಅದು ಅವನ ಜೀವನೋಪಾಯಕ್ಕೆ ಆದರೇ ಪಟ್ಟಣದಲ್ಲಿ ಜೀವಂತ ಇರುವವರು ಸ್ಮಶಾನದ ದುಡ್ಡನ್ನು ಸಹ ಬಿಡದೇ ಸ್ಮಶಾನ ಅಭಿವೃದ್ಧಿಗೆ ಅಂತ ಬಂದ ಹಣವನ್ನು ಬಿಡದ ಸ್ಮಶಾನ ವಂಚಕರು.
ಗುತ್ತಲ ಪಟ್ಟಣದ ಹಿಂದೂ ಸಮುದಾಯದ ಜನರಿಗೆ ಮರಣವಾದ ನಂತರ ಸ್ಮಶಾನವೂ ಇದ್ದರು ಇಲ್ಲದ ಹಾಗೇ ಇರುವುದು ವಿಷಾದನೀಯ ಸಂಗತಿಯಾಗಿದೆ. ದಿನದಿಂದ ದಿನಕ್ಕೆ ಪಟ್ಟಣ ಜನ ಸಂಖ್ಯೆಯಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದೆ. ಆದರೆ ಅಂತ್ಯ ಸಂಸ್ಕಾರಕ್ಕೆ ಮಾತ್ರ ಸೂಕ್ತ ಸ್ಥಳವಿಲ್ಲಾ. ಮಾನವ ಬದುಕಿರುವಾಗ ಎಲ್ಲಿ ಕೂತರು ನಡೆಯುತ್ತೆ, ಮಲಗಿದರೂ ನಡೆಯುತ್ತೆ ಮೃತನಾದಾಗ ಮಾತ್ರ ಅದಕ್ಕೆಂದೆ ಒಂದು ಸ್ಮಶಾನ ಮುಖ್ಯ. ಆದರೆ ಪಟ್ಟಣ ಮಾತ್ರ ಅಂತಹ ವ್ಯವಸ್ಥೆಯಿಂದ ವಂಚಿತಗೊಂಡಿದೆ ರಸ್ತೆಯ ಪಕ್ಕದಲ್ಲಿಯೇ ಶವ ಸಂಸ್ಕಾರ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಈ ರಸ್ತೆಯ ಮಾರ್ಗವಾಗಿ ಜನರು ಓಡಾಡಲು ಭಯ ಪಡುವಂತಾಗಿದೆ.
ಐತಿಹಾಸಿಕ ಚಂದ್ರಶೇಖರ ದೇವಸ್ಥಾನದ ಧಕ್ಕೆ: ಪಟ್ಟಣದ ಗನತೆಯನ್ನು ಹಾಗೂ ರಾಜರ ಆಳ್ವಿಕೆಯನ್ನು ತೋರಿಸುವಂತಹ ಪಟ್ಟಣದ ಹೊರವಲಯದಲ್ಲಿರುವಂತಹ ಐತಿಹಾಸಿಕಥೆಯನ್ನು ಸಾರುವ ಶ್ರೀ ಚಂದ್ರಶೇಖರ ದೇವಸ್ಥಾನದ ಪಕ್ಕದ ದೊಡ್ಡ ಹೊಂಡದ ಏರಿ ಮೇಲೆ ಶವಕ್ಕೆ ಚಿತೆ ಇಡುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ಮಹಿಳೆಯರು ಹಾಗೂ ಮಕ್ಕಳು ಈ ದೇವಸ್ಥಾನಕ್ಕೆ ಸಂಜೆಯ ಸಮಯದಲ್ಲಿ ಹೋಗುವುದಕ್ಕೆ ಭಯಪಡುವಂತಾಗಿದೆ. ಈ ರೀತಿಯ ಒಂದು ಪರಿಸ್ಥಿತಿಯಿಂದ ಪಟ್ಟಣದಲ್ಲಿರುವ ಈ ಸುಂದರ ದೇವಸ್ಥಾನ ಮುಕ್ತಿ ಹೊಂದುವುದು ಯಾವಾಗ ಎಂಬ ಪ್ರಶ್ನೆಯು ಸಾರ್ವಜನಿಕರನ್ನು ಕಾಡುತ್ತಿದೆ.
ಅಭಿವೃದ್ಧಿಯಿಂದ ವಂಚಿತ ರುದ್ರಭೂಮಿ : ಪಟ್ಟಣದಲ್ಲಿ ಹಿಂದು ಸಮಾಜದ ರುದ್ರಭೂಮಿ ಯಾವುದೇ ರೀತಿಯ ಅಭಿವೃದ್ಧಿಯನ್ನು ಹೊಂದದೆ ಮುಳ್ಳುಗಳ ಕಂಟೆಯಿಂದ ಆವೃತವಾಗಿದೆ. ಈ ಪ್ರದೇಶವು ಹಿಂದು ಸಮಾಜದ ರುದ್ರಭೂಮಿ ಎನ್ನುವುದು ಪಟ್ಟಣದಲ್ಲಿರುವಂತಹ ಎಷ್ಟೋ ಜನರಿಗೆ ತಿಳಿದಿಲ್ಲ.
ರುದ್ರಭೂಮಿ ಅಭಿವೃದ್ಧಿಗೆ ಬಂದ ಹಣವು ಗುಳುಂ : ಪಟ್ಟಣದಲ್ಲಿ ಹಿಂದೂ ಸಮಾಜದ ರುದ್ರಭೂಮಿ ಅಭಿವೃದ್ಧಿಗೆ ಅಂತಾ ಬಿಡುಗಡೆಯಾದ ಹಣವನ್ನು ಬಿಡದ ಸ್ಮಶಾನ ವಂಚಕರು. ಹಾಗಾದರೆ ರುದ್ರಭೂಮಿ ಅಭಿವೃದ್ಧಿಗೆ ಬಿಡುಗಡೆಯಾದ ಹಣ ಎಲ್ಲಿ ಹೋಯಿತು. ರುದ್ರಭೂಮಿ (ಸ್ಮಶಾನ) ಅಭಿವೃದ್ಧಿಗೆ ಬಿಡುಗಡೆಯಾಗಿ ಬಂದಂತಹ ಹಣ ಎಷ್ಟು ಆ ಹಣವನ್ನು ದೋಚಿದಂತಂಹ ವಂಚಕರಾದರು ಯಾರು? ಹಣವನ್ನು ಗುಳುಂ ಅನಿಸಿದವರ ವಿರುದ್ದ ಸಂಬಂದಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರಿಯಾದ ರಿತೀಯ ಕಾನೂನು ಕ್ರಮವನ್ನು ತೆಗೆದು ಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.