9 ಅಡಿ ವಿಸ್ತರಣೆಯಾಗಲಿರುವ ಎಜಿ ರಸ್ತೆ.

ಚಳ್ಳಕೆರೆ

         ಚಳ್ಳಕೆರೆ ನಗರದ ಜಗಲ್ಯೂರಜ್ಜ ಸ್ವಾಮಿ ಕೆರೆಯಿಂದ ರಹೀಂನಗರದ ಮೂಲಕ ಬಳ್ಳಾರಿ ರಸ್ತೆ ಸೇರುವ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲು 99 ಲಕ್ಷ ವೆಚ್ಚದ ಯೋಜನೆ ಸಿದ್ದ ಪಡಿಸಿದ್ದು, ಶೀಘ್ರದಲ್ಲೇ ತೆಡೆಗೋಡೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಕ್ಷೇತ್ರದ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

        ಅವರು, ಮಂಗಳವಾರ ಮಧ್ಯಾಹ್ನ ರಹೀಂನಗರ ಮತ್ತು ಶಾಂತಿ ನಗರ ವ್ಯಾಪ್ತಿಯಲ್ಲಿ ರಾಜಕಾಲುಗೆ ಹರಿಯುವ ಮಾರ್ಗವನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಮಳೆ ಬಂದ ಸಂದರ್ಭದಲ್ಲಿ ಹೆಚ್ಚಾದ ನೀರು ಮನೆ ಹಾಗೂ ಗುಡಿಸಲುಗಳಿಗೆ ನುಗ್ಗಿ ಹಾನಿ ಉಂಟು ಮಾಡುತ್ತಿದೆ.

        ಕಳೆದ ವರ್ಷವಷ್ಟೇ ಈ ಭಾಗದ ಸುಮಾರು 10ಕ್ಕೂ ಹೆಚ್ಚು ಗುಡಿಸಲು ನೀರಿನಲ್ಲಿ ಮುಳಿಗಿ ಅಪಾರ ನಷ್ಟ ಉಂಟಾಗಿತ್ತು. ಆದರೆ, ಯಾವುದೇ ಪ್ರಾಣಾಪಾಯವಾಗಿಲ್ಲ. ಆದರಿಂದ ಕೂಡಲೇ ರಾಜಕಾಲುವೆ ಎರಡೂ ಬದಿ ಅಡ್ಡ ಗೋಡೆ ನಿರ್ಮಿಸುವಂತೆ ಮನೆ ಮಾಡಿದ್ದರು. ಸಾರ್ವಜನಿಕ ಮನವಿ ಹಿನ್ನೆಲೆಯಲ್ಲಿ ಸರ್ಕಾರದೊಂದಿಗೆ ಚರ್ಚಿ ನಡೆಸಿದ ಶಾಸಕ ಟಿ.ರಘುಮೂರ್ತಿ ಸಣ್ಣ ನೀರಾವರಿ ಇಲಾಖೆ ಮೂಲಕ ರಾಜಕಾಲುವೆಯ ಎರಡೂ ಬದಿಯಲ್ಲಿ 99 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಿದ್ಧಾರೆ. ಈ ಹಿನ್ನೆಲೆಯಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಿದರು.

        ಇಲಾಖೆಯ ಇಂಜಿನಿಯರ್ ಅಣ್ಣಪ್ಪನವರಿಗೆ ಸೂಚಿಸಿದ ಶಾಸಕರು, ಈಗಾಗಲೇ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಎರಡ್ಮೂರು ತಿಂಗಳ ನಂತರ ಮತ್ತೆ ಮಳೆಗಾಲ ಆರಂಭವಾಗಲಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರೈಸುವಂತೆ ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ತಡೆ ಗೋಡೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ನಡೆಯಕೂಡದು. ಗುಣಮಟ್ಟಕ್ಕೆ ಆಧ್ಯತೆ ನೀಡಬೇಕು. ಎಲ್ಲೂ ಲೋಪವಾಗದಂತೆ ಜಾಗ್ರತೆ ವಹಿಸಬೇಕೆಂದರು.

         ಇದೇ ಸಂದರ್ಭದಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದಿಂದ ಶ್ರೀಜಗಲ್ಯೂರಜ್ಜ ಸ್ವಾಮಿ ದೇವಸ್ಥಾನ, ಯಾತ್ರಿ ನಿವಾಸ ಮತ್ತು ಶ್ರೀವಾಲ್ಮೀಕಿ ಸಮುದಾಯ ಭವನದ ರಸ್ತೆ ವಿಸ್ತರಣೆಗೆ ಸೂಚಿಸಿದ ಶಾಸಕರು ಖಾಸಗಿ ಬಸ್ ನಿಲ್ದಾಣದಿಂದ ನನ್ನಿವಾಳ ರಸ್ತೆ ಮಾರ್ಗವಾಗಿ ಒಟ್ಟು 30 ಮೀಟರ್ ಅಗಲದ 136 ಮೀಟರ್ ರಸ್ತೆಯನ್ನು ಅಗಲೀಕರಣ ಗೊಳಿಸುವಂತೆ ಸೂಚಿಸಿದರು. ಒಟ್ಟು 90 ಅಡಿ ಅಗಲದ ರಸ್ತೆ ಎರಡೂ ಬದಿಯಲ್ಲೂ ತಲಾ 5 ಅಡಿಯಂತೆ 10 ಅಡಿ ಪುಟ್‍ಬಾತ್ ನಿರ್ಮಿಸುವಂತೆ ಶಾಸಕರು ಸೂಚಿಸಿದರು. ಇದೇ ಸಂದರ್ಭದಲ್ಲಿ ಅಲ್ಲಿನ ಹಲವಾರು ನಿವಾಸಿಗಳು ರಸ್ತೆಯ ಅಲ್ಪಸ್ವಲ್ಪ ಜಾಗದಲ್ಲಿ ಮನೆಗಳನ್ನು ನಿರ್ಮಿಸಿದ್ದು, ಅಗಲೀಕರದಲ್ಲಿ ರಿಯಾಯ್ತಿ ನೀಡುವಂತೆ ಮನವಿ ಮಾಡಿದರು.

         ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ಸುಜಾತ, ಆರ್.ಪ್ರಸನ್ನಕುಮಾರ್, ಪಾಲಯ್ಯ, ಶ್ರೀನಿವಾಸ್‍ಚಾರಿ, ಬಡಗಿ ಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link