ಮಧುಗಿರಿ:
ಯುವಕನೊಬ್ಬನ ಮೇಲೆ ಅಪರಿಚಿತ ವಾಹನ ಹರಿಸಿ ಕೊಲೆ ಮಾಡಿ, ರಸ್ತೆಯ ಸಮೀಪ ಶವವನ್ನು ಎಸೆದು ಪರಾರಿಯಾಗಿರುವ ಘಟನೆ ಪಟ್ಟಣದ ನೃಪತುಂಗ ರಸ್ತೆಯಲ್ಲಿನ ಗುರುಭವನ ಮುಂಭಾಗ ನಡೆದಿದೆ.
ದೊಡ್ಡೇರಿ ಹೋಬಳಿಯ ಸೋದೇನಹಳ್ಳಿ ವಾಸಿ ನಾಗೇಶ್ (25) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಿಡಿಗೇಡಿಗಳು ನಾಗೇಶನ ದೇಹದ ಎಡಭಾಗದ ಮೇಲೆ ಅಪರಿಚಿತ ವಾಹನ ಹರಿಸಿದ್ದು ಬೇರೊಂದು ಕಡೆ ಕೊಲೆ ಮಾಡಿದ್ದಾರೆನ್ನಾಲಾಗುತ್ತಿದೆ. ದೇಹವೆಲ್ಲಾ ರಕ್ತ ಸಿಕ್ತವಾದ ಗಾಯದ ಕಲೆಗಳಿಂದ ಕೂಡಿದೆ. ಕೆಲ ಆಟೋ ಚಾಲಕರು ಬೆಳ್ಳಂಬೆಳಗ್ಗೆ ರಸ್ತೆಯ ಸಮೀಪವಿದ್ದ ಶವವನ್ನು ಗಮನಿಸಿ ಪೋಲೀಸರಿಗೆ ಮಾಹಿತಿ ನೀಡಿ ತಮ್ಮ ಆಟೋದಲ್ಲಿದ್ದ ಕವರ್ ವೊಂದನ್ನು ದೇಹದ ಮೇಲೆ ಹೊದಸಿದ್ದಾರೆ.
ಮೃತನ ತಾಯಿ ಪುಟ್ಟಮ್ಮ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗುರುತಿಸಿದ ನಂತರ ಪೋಲೀಸರು ಶವವನ್ನು ಶವಗಾರಕ್ಕೆ ಕಳುಹಿಸಿ ಕೊಡಲಾಯಿತು. ಸ್ಥಳಕ್ಕೆ ಮಧುಗಿರಿ ಪೋಲೀಸರು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ