ಬೆಂಗಳೂರು
ಗುರುತು ಸಿಗದಂತೆ ಕತ್ತು ಬಿಗಿದು ಮುಖ ಜಜ್ಜಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ಪ್ರಕರಣವನ್ನು ಕಾಲರ್ ಪಟ್ಟಿಯಲ್ಲಿದ್ದ ಹೆಸರಿನ ಸುಳಿವನ್ನು ಆಧರಿಸಿ ಭೇದಿಸಿರುವ ಗ್ರಾಮಾಂತರ ಪೊಲೀಸರು ಮಹಿಳೆ ಸೇರಿ ಇಬ್ಬರನ್ನು ಬಂಧಿಸಿ ಅಪ್ರಾಪ್ತ ಬಾಲಕನೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರದ ಉಜ್ಜನಿ ಅರಣ್ಯ ಪ್ರದೇಶದಲ್ಲಿ ಕೊಲೆಯಾದ ವ್ಯಕ್ತಿಯನ್ನು ಕೋಡಿಹಳ್ಳಿಯ ಉಮೇಶ್(30) ಎನ್ನುವುದನ್ನು ಆತನ ಶರ್ಟ್‍ನ ಕಾಲರ್ ಪಟ್ಟಿಯಲ್ಲಿ ಟೈಲರ್ ಅಂಗಡಿಯ ಹೆಸರಿನ ವಿಳಾಸದ ಮೇಲೆ ಪೊಲೀಸರು ಪತ್ತೆಹಚ್ಚಿದ್ದಾರೆ.
ಉಮೇಶ್ ಕೊಲೆಯಲ್ಲಿ ಭಾಗಿಯಾಗಿದ್ದ ಆತನ ಪತ್ನಿ ಗಾಯತ್ರಿ(23) ಕೃತ್ಯವೆಸಗಿದ್ದ ದೊಡ್ಡಬಳ್ಳಾಪುರದ ರಾಜಘಟ್ಟದ ಕಿರಣ್ ಕುಮಾರ್ ಅಲಿಯಾಸ್ ಗಿಡ್ಡ (20)ನನ್ನು ಬಂಧಿಸಿ ಆತನ ಸಹೋದರ ಅಪ್ರಾಪ್ತ ಬಾಲಕನನ್ನು ವಶಕ್ಕೆ ತೆಗೆದುಕೊಂಡು ರಿಮ್ಯಾಂಡ್ ಹೊಂಗೆ ಕಳುಹಿಸಲಾಗಿದ್ದು ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ನಡೆದ ಕೊಲೆ ಇದಾಗಿದೆ ಎನ್ನುವುದನ್ನು ಬಯಲಿಗೆಳೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








