ನಗರ ಸಭೆಯ ಭರ್ಜರಿ ಭೇಟೆ ಲಕ್ಷಾಂತರ ರೂ ಅಕ್ರಮ ಪ್ಲಾಸ್ಟಿಕ್ ವಶ

ತಿಪಟೂರು :

         ನಗರದಲ್ಲಿ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರ ಮೇಲೆ ಸಮರ ಸಾರಿದ್ದ ಪೌರಾಯುಕ್ತೆ ಡಾ. ಮಧುಪಾಟೀಲ್ ತಂಡ ಇಂದು ಗೊರಗೊಂಡನಹಳ್ಳಿಯಲ್ಲಿ ಅಕ್ರಮವಾಗಿ ದಾಸ್ತಾನುಮಾಡಿದ್ದ ಗೋದಾಮಿನ ಮೇಲೆ ದಾಳಿಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ನಿಷೇದಿತ ಪ್ಲಾಸ್ಟಿಕ್‍ಅನ್ನು ವಶಪಡಿಸಿಕೊಂಡರು.

        ಇಂದು ಮದ್ಯಾಹ್ನ ನಗರದಲ್ಲಿ ಕೆಲವು ಅಂಗಡಿಗಳ ಮೇಳೆ ದಾಳಿಮಾಡಿ ನಿಷೇದಿತ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಲೋಟ, ತಟ್ಟೆ, ಮತ್ತು ಥರ್ಮಾಕೋಲ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವಾಗ ನಗರದ ಗೊರಗೊಂಡನಹಳ್ಳಿಯಲ್ಲಿ ಇರುವ ಗೋದಾಮಿನ ಬಗ್ಗೆ ತಿಳಿದ ಅದರ ಮೇಲೆ ನಗರಸಭೆ ಸಿಬ್ಬಂದಿಗಳು ಮತ್ತು ಪೋಲೀಸರು ದಾಳಿಮಾಡಿದಾಗ ಅಪಾರ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದಿದ್ದು ಇದುವರೆಗೂ ಧನಲಕ್ಷ್ಮೀ ಪ್ಲಾಸ್ಟಿಕ್‍ನ ಮಾಲೀಕ ಕಿಶನ್ ರವರಿಗೆ ಸೇರಿದು ಸುಮಾರು 4 ಟ್ರ್ಯಾಕ್ಟರ್ ಲೋಡ್ ಆಗಿದ್ದು ಅದನ್ನು ನಗರದ ಸಂತೆಪೇಟೆಯಲ್ಲಿ ಮೆರವಣಿಗೆ ಮಾಡಿ ಇತರೆ ವರ್ತಕರಿಗೆ ಎಚ್ಚರಿಕೆಯನ್ನು ನೀಡಲಾಗುವದೆಂದು ಪೌರಾಯುಕ್ತರು ತಿಳಿಸಿದರು.

          ಕೆಳದ 15 ದಿನಗಳಿಂದ ಪ್ಲಾಸ್ಟಿಕ್ ನಿಷೇದದ ಕುರಿತು ಪ್ರಕಟಣೆ ಹೊರಡಿಸಿದ್ದ ನಗರಸಭೆ ಅಧಿಕಾರಿಗಳು ಪತ್ರಿಕೆ ಮೂಲಕ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಬಾರದೆಂದು ಕಡ್ಡಾಯವಾಗಿ ಸೂಚಿಸಲಾಗಿದ್ದು ಮಾರ್ಚ್ ಒಂದರಂದು ಕೆಲವು ಅಂಗಡಿಗಳ ಮೇಲೆ ದಾಳಿಮಾಡಿ ಸುಮಾರು 650 ಕೆ.ಜಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇಂದು ದಾಳಿಯ ಪರಿಣಾಮ ಹೇಗಿದೆ ಎಂದು ತಿಳಿಯಲು ಹೋದಾಗ ಕೆಲವು ಅಂಗಡಿಯವರು ನೇರವಾಗಿ ಗೋದಾಮಿನಿಂದ ಸರಬರಾಜು ಮಾಡುತ್ತಿರುವುದು ಕಂಡು ಬಂದು ದಾಳಿಮಾಡಿದೆವು ಇವರು ಆದೇಶ ಮೀರಿ ಪ್ಲಾಸ್ಟಿಕ್‍ವಸ್ತುಗಳನ್ನು ವ್ಯಾಪಾರಮಾಡುತ್ತಿದ್ದಾರೆ ಇದರ ಬಗ್ಗೆ ಪರಿಸರ ಮಾಲಿನ್ಯ ಇಲಾಖೆಗೆ ದೂರು ಸಲ್ಲಿಸಿ ಮಾಲೀಕರ ಮೇಲೆ ಮತ್ತು ಸ್ಥಳದ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ಆರೋಗ್ಯಾಧಿಕಾರಿ ತೀರ್ಥಪ್ರಸಾದ್ ತಿಳಿಸಿದರು.

ಎಚ್ಚರಿಕೆ :

          ಪರವಾನಿಗೆ ನವೀಕರಿಸದೆ, ಉದ್ದಿಮೆ ಪರವಾನಿಗೆ ಪಡೆಯದೆ ಅಂಗಡಿ ನಡೆಸುತ್ತಿದ್ದವರಿಗೆ ನೊಟೀಸ್ ಜಾರಿ ಮಾಡುವಂತೆ ಸ್ಥಳದಲ್ಲೇ ಕಂದಾಯ ಅಧಿಕಾರಿಗಳಿಗೆ ಪೌರಾಯುಕ್ತರು ಆದೇಶ ನೀಡಿದರು.

   ಈ ಸಂದರ್ಭದಲ್ಲಿ ನಗರಸಭಾ ಪರಿಸರ ಅಭಿಯಂತರ ಕಾವ್ಯಶ್ರೀ, ನಗರಸಭಾ ಸಿಬ್ಬಂದಿ ಮತ್ತು ಆರಕ್ಷಕ ಸಿಬ್ಬಂದಿ ದಾಳಿಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap