ನಗರದ ಮೌರ್ಯ ಸರ್ಕಲ್ ಬಳಿ ಅರ್ಚಕರ ಪ್ರತಿಭಟನೆ..!!

ಬೆಂಗಳೂರು

        ಹಿಂದೂ ಧರ್ಮ ರಕ್ಷಣೆ ಹಾಗೂ ಕನಿಷ್ಠ ಮಾಸಿಕ ವೇತನ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಅರ್ಚಕರ, ಆಗಮಿಕರ ಸಂಘದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು .ನಗರದ ಮೌರ್ಯ ವೃತ್ತದಲ್ಲಿ ಸೇರಿದ ಅರ್ಚಕರ ಸಂಘದ ಪದಾಧಿಕಾರಿಗಳು ಕಾರ್ಯಕರ್ತರು ಅರ್ಚಕರಿಗೆ ಕನಿಷ್ಠ ಮಾಸಿಕ ವೇತನ ಸೇರಿದಂತೆ ಒತ್ತಾಯಿಸಿ ಘೋಷಣೆ ಕೂಗಿದರು. ನಂತರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಜಾನಕಿರಾಂ, ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 34 ಸಾವಿರ ಸಿ ದರ್ಜೆ ದೇವಾಲಯಗಳಿವೆ.

        ದೇವಾಲಯಗಳಿಗೆ ಸಂದಾಯವಾಗುವ ಕಸ್ತಿಕ್ ಹಣ 4 ಸಾವಿರ ರೂ.ಗಳನ್ನು ಪೂಜೆಗಳಿಗಾಗಿ ನೀಡಲಾಗುತ್ತಿದೆ. ಆದರೆ, ಈ ಹಣದಲ್ಲಿ 1,400 ರೂ.ಗಳನ್ನು ಮಾತ್ರ ಅರ್ಚಕರಿಗೆ ಸಂಭಾವನೆ ರೂಪದಲ್ಲಿ ನೀಡಲಾಗುತ್ತಿದೆ. ಇದರಿಂದ ಅರ್ಚಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ.

          ಈ ಹಿಂದೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ 5 ಸಾವಿರ ಗೌರವ ಧನ ನೀಡಲು ಮನವಿ ಮಾಡಲಾಗಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ದೇವಾಲಯಗಳ ನಿರ್ವಹಣೆಯೂ ಸಹ ಸಮರ್ಪಕವಾಗಿಲ್ಲ. ಖಾಸಗಿ ದೇವಾಲಯಗಳಿಗೆ ಸರ್ಕಾರದಿಂದ ನೀಡುವ ಅನುದಾನದ ಬದಲು ಮುಜರಾಯಿ ಇಲಾಖೆ ದೇವಾಲಯಗಳಿಗೆ ಸರ್ಕಾರ ಅನುದಾನ ನೀಡುವುದರೊಂದಿಗೆ ಅರ್ಚಕರ ಎಲ್ಲರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link