ಕೆ ಜಿ ಕೃಷ್ಣ ಮೇಲೆ ಐಟಿ ದಾಳಿ…!!!

ಬೆಂಗಳೂರು

        ನಗರದ ಹೈಗ್ರೌಂಡ್ ಬಳಿಯ ಪ್ರೆಸ್ಟೀಜ್ ಇಬ್‍ಷಾಟ್ ಅಪಾರ್ಟ್‍ಮೆಂಟ್‍ನಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಜಿ.ಕೃಷ್ಣ ಅವರ ಮನೆ ಮೇಲೆ ದಳಿ ನಡೆಸಿದ ಆದಾಯ ತೆರಿಗೆ ಇಲಾಖೆ(ಐಟಿ)ಅಧಿಕಾರಿಗಳಿಗೆ 8 ಕೆಜಿ ಚಿನ್ನ ಪತ್ತೆಯಾಗಿದೆ.ಕೃಷ್ಣ ಅವರ ಫ್ಲಾಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನ ಪರಿಶೀಲನೆ ನಡೆಸಿದಾಗ 300 ಎಕರೆಯ ದಾಖಲೆ ಪತ್ರ, ಸುಮಾರು 8 ಕೆ.ಜಿ.ಚಿನ್ನಾಭರಣ, ಕೋಟಿ ಕೋಟಿ ಹಣ ಪತ್ತೆಯಾಗಿದೆ

      ರಿಯಲ್ ಎಸ್ಟೇಟ್ ಉದ್ಯಮಿ ಕೆ.ಜಿ.ಕೃಷ್ಣ ಅವರ ಪ್ರೆಸ್ಟೀಜ್ ಇಬ್‍ಷಾಟ್ ಅಪಾರ್ಟ್‍ಮೆಂಟ್‍ನ 202ರ ಮನೆ ಮೇಲೆ 20 ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದೆ.ದೇವನಹಳ್ಳಿ, ತುಮಕೂರು, ಮೈಸೂರು ಸೇರಿದಂತೆ ಹಲವೆಡೆ ಜಮೀನು ಹೊಂದಿದ್ದ ಕೃಷ್ಣ ಅವರ ಮನೆಯಿಂದ 300 ಎಕರೆಯ ದಾಖಲೆ ಪತ್ರ, ಸುಮಾರು 8 ಕೆ.ಜಿ.ಚಿನ್ನಾಭರಣ, ಕೋಟಿ ಕೋಟಿ ಹಣ ಹಾಗೂ ಅಪಾರ ಪ್ರಮಾಣದ ಆಸ್ತಿ ಪತ್ರಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link