ಸ್ವಚ್ಚತೆಗೆ ನಗರಸಭೆ ಜೊತೆ ಕೈಜೋಡಿಸಿ

ಚಿತ್ರದುರ್ಗ:

      ಕಸ ಎಲ್ಲೆಂದರಲ್ಲಿ ಹಾಕಬಾರದೆಂದು ನ್ಯಾಯಾಲಯ ಹಾಗೂ ಸರ್ಕಾರದ ಆದೇಶವಿರುವುದರಿಂದ ವ್ಯವಸ್ಥಿತವಾಗಿ ಕಸ ಸಂಗ್ರಹಿಸಿ ಸ್ವಚ್ಚತೆಯನ್ನು ಕಾಪಾಡುವ ಉದ್ದೇಶದಿಂದ ನಗರಸಭೆಯೊಂದಿಗೆ ಕೈಜೋಡಿಸಿ ಎಂದು ನಗರದಲ್ಲಿ ಕಸ(ಚಿಂದಿ) ಹಾಯುವವರಲ್ಲಿ ನಗರಸಭೆ ಪೌರಾಯುಕ್ತ ಚಂದ್ರಪ್ಪ ವಿನಂತಿಸಿದರು.

        ನಗರಸಭೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ಚಿಂದಿ ಹಾಯುವವರ ಸಭೆ ಉದ್ದೇಶಿಸಿ ಮಾತನಾಡಿದ ಚಂದ್ರಪ್ಪನವರು ಹಸಿ ಕಸ ಮತ್ತು ಒಣಕಸವನ್ನು ಮರುಬಳಕೆ ಮಾಡಿಕೊಳ್ಳುವುದಕ್ಕಾಗಿ ನಗರಸಭೆಯಿಂದ ನಿಮಗೆ ಒಂದು ಏರಿಯಾ ಫಿಕ್ಸ್ ಮಾಡುತ್ತೇವೆ. ಇಲ್ಲವೇ ನೀವುಗಳು ಎಲ್ಲಿ ಕಸ ಆಯುತ್ತೀರೋ ಅಲ್ಲಿಯೇ ಸಂಗ್ರಹಿಸಿ. ವೆಂಕಟೇಶ್ವರ ಬಡವಾಣೆ, ಚಳ್ಳಕೆರೆ ಗೇಟ್ ಹಾಗೂ ನಗರದಲ್ಲಿ ಚಿಂದಿ ಹಾಯುವವರು ಹೆಚ್ಚಾಗಿ ಇದ್ದಾರೆ, ಅಧಿಕೃತ ಕಸ ಸಂಗ್ರಹಣೆಗಾರರೆಂದು ನಗರಸಭೆಯಿಂದ ನಿಮಗೆ ಗುರುತಿನ ಚೇಟಿ ನೀಡುತ್ತೇವೆ.

         ನಿಮ್ಮ ಸೇವೆಯನ್ನು ಬಳಸಿಕೊಳ್ಳಲು ನಾವು ಸಿದ್ದರಿದ್ದೇವೆ. ನಗರಸಭೆಯೊಂದಿಗೆ ಸಹಕರಿಸಿ. ಮನಬಂದಂತೆ ಎಲ್ಲಿಯೂ ಕಸವನ್ನು ಎಸೆಯಬಾರದು. ಮನೆಯ ಕಸವನ್ನು ತಂದು ರಸ್ತೆಗೆ ಸುರಿದರೆ ದಂಡ ವಿಧಿಸಲಾಗುವುದು. ನೂರು ಮಂದಿಗೆ ಪ್ರತಿ ವರ್ಷವೂ ಸ್ವ-ಉದ್ಯೋಗ ನಡೆಸಲು ನಗರಸಭೆಯಿಂದ ಅನುಕೂಲ ಮಾಡಿಕೊಡಲಾಗುವುದು ಪ್ರಯೋಜನ ಪಡೆದುಕೊಂಡು ಜೀವನಮಟ್ಟ ಸುಧಾರಿಸಿಕೊಳ್ಳಿ ಎಂದು ಕೋರಿದರು.

         ಎಲ್ಲಾ ದೃಷ್ಟಿಯಿಂದಲೂ ನಿಮ್ಮನ್ನು ಸರಿದಾರಿಗೆ ತರುವುದು ನಮ್ಮ ಉದ್ದೇಶ. ನಗರಸಭೆಯಲ್ಲಿ ಹೆಸರುಗಳನ್ನು ನೊಂದಾಯಿಸಿಕೊಂಡು ಗುರುತಿನ ಚೀಟಿ ಪಡೆದುಕೊಳ್ಳಿ. ಕಸ ಹಾಯುವ ವಿಧಾನವನ್ನು ಬದಲಾವಣೆ ಮಾಡಲು ಹೊರಟಿದ್ದೇವೆ. ನಿವೇಶನ, ಮನೆ ಇಲ್ಲದವರ ಪಟ್ಟಿ ಮಾಡಿದ್ದೇವೆ. ಅದರಲ್ಲಿ ನಿಮ್ಮ ಹೆಸರುಗಳು ಇರಬಹುದು. ಇಲ್ಲದವರು ಪಟ್ಟಿಯಲ್ಲಿ ಸೇರಿಸಿ ಮೂಲ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬನ್ನಿ ಎಂದು ಮನವಿ ಮಾಡಿದರು.ಪರಿಸರ ಇಂಜಿನಿಯರ್ ಜಾಫರ್, ಸಮುದಾಯ ಸಂಘಟಕಿ ನಾಗರತ್ನಮ್ಮ, ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಸರಳ, ಭಾರತಿ, ಕಾಂತರಾಜ್, ಬಾಬುರೆಡ್ಡಿ, ಅಶೋಕ್, ಮಂಜುನಾಥ್, ಚಿಂದಿ ಹಾಯುವವರ ಸಂಘಧ ಅಧ್ಯಕ್ಷ ರಮೇಶ್‍ಗೋಸಾಯಿ ಸಭೆಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap