ಈ ಬಾರಿಯ ಚುನಾವಣೆ ಪ್ರಜಾಪ್ರಭುತ್ವ v/s ಸರ್ವಾಧಿಕಾರಿ‌ ಧೋರಣೆಯಾಗಿದೆ : ಸಿದ್ದು

ಹಾವೇರಿ

       ಈ ಚುನಾವಣೆ ಕಾಂಗ್ರೆಸ್ ವರ್ಸಸ್ ಬಿಜೆಪಿ ಅಲ್ಲ,‌ರಾಹುಲ್ ವರ್ಸಸ್ ಮೋದಿ ಅಲ್ಲ. ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರಿ‌ ಧೋರಣೆ ನಡುವೆ ನಡೆಯುತ್ತಿರುವ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ,ಹೇಳಿದ್ದಾರೆ.

       ಹಾವೇರಿಯ ಮುನಿಸಿಪಲ್‌ ಮೈದಾನದಲ್ಲಿ ಪರಿವರ್ತನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಈ ಭಾರಿಯ ಚುನಾವಣೆ ಪಕ್ಷ ಪಕ್ಷಗಳ ನಡುವಿನ ಹೋರಾಟವಲ್ಲ. ಬದಲಿಗೆ ಇದು ಸೈದ್ದಾಂತಿಕತೆ ಹೋರಾಟ ಎಂದು ಸಿದ್ದರಾಮಯ್ಯ ಬಣ್ಣಿಸಿದರು. ‌ ‌ ರಾಜ್ಯಕ್ಕೆ ಎರಡು ಭಾರಿ ಪ್ರಧಾನಿ ಮೋದಿ ಬಂದಿದ್ದಾರೆ. ಆದರೆ ರಾಜ್ಯದ ಅಭಿವೃದ್ದಿ,ಸಮಸ್ಯೆಗಳ ಬಗ್ಗೆ ಒಂದೂ ಮಾತನಾಡಿಲ್ಲ. ಬದಲಾಗಿ ಭಾವನಾತ್ಮಕ‌ ವಿಚಾರಗಳನ್ನು ಪ್ರಸ್ತಾಪಿಸಿ ಜನರನ್ನು‌ ದಾರಿ‌ ತಪ್ಪಿಸುತ್ತಾರೆ ಎಂದರು. ‌ ‌‌ ‌‌

        ಅಚ್ಚೇದಿನ್ ಆಯೇಗಾ ಎಂದು ಪ್ರಧಾನಿ ಹೇಳಿದರು. ೫ ವರ್ಷ ಅವಧಿ ಮುಗಿದರೂ ಜನರಿಗೆ ಅಚ್ಚೇದಿನ್ ಬರಲಿಲ್ಲ.. ಅಂಬಾನಿ, ಅದಾನಿ ನೀರವ್ ಮೋದಿ, ಮಲ್ಯಗೆ ಅವರಿಗೆ ಅಚ್ಚೇದಿನ್ ಬಂದಿದೆ ಎಂದು ವ್ಯಂಗ್ಯವಾಡಿದರು. ‌ ‌‌ ಈ‌ ಚುನಾವಣೆ ಅಭಿವೃದ್ದಿ ಮತ್ತು ಅಭಿವೃದ್ಧಿ ಪೂರಕ‌ ವಿಚಾರಗಳ ಬಗ್ಗೆ ಚರ್ಚೆ ಆಗಬೇಕು. ರೈತರ ಸಾಲಮನ್ನಾ ಮಾಡಲಿಲ್ಲ. ಬದಲಾಗಿ ರೈತರಿಗೆ ಖಾತೆಗೆ ೨೦೦೦ ರೂ ಜಮಾ ಮಾಡುವುದಾಗಿ ಹೇಳಿದ್ದಾರೆ.

         ಅಧಿಕಾರಕ್ಕೆ ಬಂದ ೨ ನೇ ವರ್ಷದಲ್ಲಿ ಮಾಡಲಿಲ್ಲ.೩ ನೇ ವರ್ಷದಲ್ಲಿ ಮಾಡಲಿಲ್ಲ.‌ ಚುನಾವಣೆ ಅಂತಿಮ ಕ್ಷಣದಲ್ಲಿ ರೈತರ ಖಾತೆಗೆ ಹಣ ಹಾಕುವ ಮೂಲಕ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಪ್ರಧಾನ ಮಂತ್ರಿ ಕೃಷಿಕ್ ಸಮ್ಮಾನ್ ಯೋಜನೆ ಬಗ್ಗೆ ಸಿದ್ದರಾಮಯ್ಯ ಕಿಡಿ ಕಾರಿದರು. ‌ ‌

        ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎರೆಡು ಭಾರಿ ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವಪಕ್ಷ‌ ನಿಯೋಗ ಕೊಂಡೊಯ್ದು ಸಾಲ ಮನ್ನಾ ಮಾಡಲು ಸಹಾಯ ಮಾಡುವಂತೆ ಮನವಿ ಮಾಡಿದೆವು.ಆದರೆ ಬಿಜೆಪಿಯ ಒಬ್ಬ ನಾಯಕರು ಪ್ರಧಾನಿ‌ ಬಳಿ ತುಟಿ ಪಿಟಿಕ್ ಎಂದು ಮಾತನಾಡಲಿಲ್ಲ. ‌ ‌ ‌‌

‌‌       ‌ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾಲಮನ್ನಾ ಮಾಡಲಿಕ್ಕೆ ನಮ್ಮ ಬಳಿ‌ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ. ಎಂದು ಉತ್ತರ‌ ನೀಡಿದ್ದರು.ಬಿಜೆಪಿಯವರಿಗೆ ರೈತರ ಬಗ್ಗೆ ಕಳಕಳಿ,ಕಾಳಜಿ ಎರಡೂ ಇಲ್ಲ.ರೈತರನ್ನು ಹೆಸರಿನಲ್ಲಿ‌ ರಾಜಕೀಯ ಮಾಡುತ್ತಾರೆ ಅವರನ್ನು ನಂಬದಿರಿ ಎಂದರು. ‌ ‌ ‌

         ಮಾಜಿ‌ ಸಚಿವ ಸಿ.ಎಂ.ಉದಾಸಿ ಹಾಗೂ ಅವರ ಮಗ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಕ್ಷೇತಗರದಲ್ಲಿ ಒಂದೂ ಅಭಿವೃದ್ದಿ ಕೆಲಸ ಮಾಡಿಲ್ಲ ಜನರಿಗೆ ಟೋಪಿ ಹಾಕಿ‌ ಗೆದ್ದು ಬಂದಿದ್ದಾರೆ.ಜನರಿಗೆ ಉಪಯೋಗ ಆಗದ ಸಂಸದ ಶಿವಕುಮಾರ್ ಉದಾಸಿ ಅವರನ್ನು ಮನೆಗೆ ಕಳುಹಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಮತದಾರರಲ್ಲಿ‌ಮನವಿ ಮಾಡಿದರು. ‌ ‌ ‌‌ ‌‌

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link