ಹರಿಹರ;
ನಗರದ ಖ್ಯಾತ ಉದ್ಯಮಿ, ನಗರಸಭೆ ಮಾಜಿ ಸದಸ್ಯ, ಬಿಜೆಪಿ ಮುಖಂಡ ಡಿ.ಹೇಮಂತರಾಜ್‍ರ ಅಂಗಡಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆಂದು ತಿಳಿದು ಬಂದಿದೆ.
ನಗರದ ಮುಖ್ಯ ರಸ್ತೆ ಮಧು ಟೆಕ್ಸ್‍ಟೈಲ್ಸ್ ಪಕ್ಕದಲ್ಲಿರುವ ಡಿ.ಸಿದ್ದಪ್ಪ ಅಂಡ್ ಸನ್ಸ್ ಹೋಲ್‍ಸೇಲ್ ಕಿರಣಿ ಅಂಗಡಿಗೆ ಬೆಳಿಗ್ಗೆ 11.30ಕ್ಕೆ ಆಗಮಿಸಿ, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಲು ಆರಂಭಿಸಿದರು. ಆಗ ತೆರೆದಿದ್ದ ಅಂಗಡಿ ಬಾಗಿಲನ್ನು ಮುಚ್ಚಲಾಯಿತು.
ಇವರ ಮನೆಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದರು, ಶಿವಮೊಗ್ಗ ರಸ್ತೆಯಲ್ಲಿ ಇವರು ನಿರ್ಮಿಸುತ್ತಿರುವ ಬೃಹತ್ ಕಲ್ಯಾಣ ಮಂಟಪಕ್ಕೂ ಅಧಿಕಾರಿಗಳು ಭೇಟಿ ನೀಡಿದ್ದರೆಂದು ತಿಳಿದು ಬಂದಿದೆ.ಬೆಳಿಗ್ಗೆ ಅಂಗಡಿಗೆ ಬಂದ ಗ್ರಾಹಕರನ್ನು ವಾಪಸ್ ಕಳಿಸಲಾಯಿತು. ರಾತ್ರಿ 9 ಗಂಟೆಯಾದರೂ ಅಧಿಕಾರಿಗಳ ಪರಿಶೀಲನೆ ಮುಂದುವರೆದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








