ವೈದ್ಯನ ಎಡವಟ್ಟು : 3 ತಿಂಗಳ‌‌ ಮಗುವಿನ ಬೆರಳು ಕಟ್ !!!

ಬೆಳಗಾವಿ: 

      ಮಗುವಿನ ಬ್ಯಾಂಡೇಜ್ ತೆಗೆಯುವ ವೇಳೆಯಲ್ಲಿ ಬೆರಳನ್ನೇ ಕಟ್ ಮಾಡಿರುವ ಆಘಾತಕಾರಿ ಘಟನೆಯೊಂದು ನಗರದ‌ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಬೆಳಗಾವಿ ಚಿಲ್ಡ್ರನ್ ಆಸ್ಪತ್ರೆಯಲ್ಲಿ ಈ‌ ಘಟನೆ ನಡೆದಿದೆ.

      ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಕ್ಯಾರಕೊಪ್ಪದ ಉಮೇಶ್ ಅವರ 3 ತಿಂಗಳ ಹಸುಗೂಸಿಗೆ ಜ್ವರ ಬಂದಿದ್ದು, ಬೆಳಗಾವಿಯ ಚಿಲ್ಡ್ರನ್ ಆಸ್ಪತ್ರೆಗೆ ಸೇರಿಸಲಾಗಿದೆ. ಮಗುವಿಗೆ ಡ್ರಿಪ್ ಹಾಕಿದ್ದು, ಬ್ಯಾಂಡೇಜ್ ತೆಗೆಯುವ ಸಂದರ್ಭದಲ್ಲಿ ವೈದ್ಯ ಮತ್ತು ಸಿಬ್ಬಂದಿ ಯಡವಟ್ಟಿನಿಂದ ಬೆರಳನ್ನು ಕಟ್ ಮಾಡಲಾಗಿದೆ. ತುಂಡಾದ ಬೆರಳನ್ನು ಜೋಡಿಸಲು ವೈದ್ಯ ವಿಫಲ ಯತ್ನ ನಡೆಸಿದ್ದು, ಯಾವುದೇ ಪ್ರಯೋಜನವಾಗಿಲ್ಲ.

     ಈ ಸಂಬಂಧ ವೈದ್ಯ ಡಾ. ಬಾಬಣ್ಣ ಬಾಬಣ್ಣ ಹುಕ್ಕೇರಿ, ನರ್ಸ್ ಆಶ್ವಿನಿ ವಿರುದ್ಧ  ವಿರುದ್ಧ ಮಗುವಿನ ಪೋಷಕರು ಖಡೇಬಜಾರ್ ಠಾಣೆಗೆ ದೂರು ದಾಖಲಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link