ಬೆಂಗಳೂರು
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಯಾವ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿ ಎಷ್ಟು ಮಂದಿ ಕೆಲಸ ನೀಡಿದೆ ಎನ್ನುವುದರ ಶ್ವೇತ ಪತ್ರ ಹೊರಡಿಸಲಿ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಆಗ್ರಹಿಸಿದ್ದಾರೆ.
ದೇಶಕ್ಕೆ ಮೂಲಭೂತ ಸೌಕರ್ಯಗಳ ಹಾಗೂ ಉದ್ಯೋಗಗಳ ಅಗತ್ಯವಿರುವುದನ್ನು ಚುನಾವಣೆ ಸಂದರ್ಭದಲ್ಲಿ ಮರೆಮಾಚಿ ಬಣ್ಣ ಬಣ್ಣದ ಮಾತುಗಳನ್ನು ಆಡುವುದನ್ನು ಬಿಟ್ಗಟು ಉದ್ಯೋಗ ಸೃಷ್ಠಿಯ ಶ್ವೇತ ಪತ್ರ ಹೊರಡಿಸಬೇಕೆಂದು ಆಗ್ರಹಿಸೋಣ ಎಂದರು.
ನಗರದಲ್ಲಿಂದು ಕುಮಾರಕೃಪಾದ ಗಾಂಧಿ ಭವನದಲ್ಲಿ ನಮ್ಮ ಧ್ವನಿ ಸಂಘಟನೆ ಆಯೋಜಿಸಿದ್ದ, ‘ಪ್ರಬುದ್ಧ ಭಾರತ’ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು ದೇಶ ಮಾರಾಟ ಮಾಡುವ ಕಾಯಕವನ್ನೇ,ಇದು ದೇಶ ಪ್ರೇಮ ಎನ್ನುತ್ತಾರೆ. ಅಷ್ಟೇ ಅಲ್ಲದೆ, ಚುನಾವಣೆಯಲ್ಲಿ ಅಭಿವೃದ್ಧಿ ಚರ್ಚೆ ಮಾಡುವ ಬದಲು ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಹೀಗಾಗಿ, ಪ್ರಗತಿಪರರು, ಬೆಂಕಿ ಸಹವಾಸಕ್ಕೆ ಕೈ ಹಾಕದೆ, ಅಭಿವೃದ್ಧಿ ಕುರಿತು ಪ್ರಶ್ನೆ ಮಾಡಬೇಕು ಎಂದರು.
ಕಾಡಿನಲ್ಲಿ ವಾಸಿಸುತ್ತಿದ್ದ ಆದಿವಾಸಿಗಳನ್ನು ಹೊರ ಹಾಕಲಾಗಿದೆ.ಅಷ್ಟೇ ಅಲ್ಲದೆ, ರೈತರ ಭೂಮಿ, ಕೃಷಿ ಚಟುವಟಿಕೆಗಳನ್ನು ಕಸಿದುಕೊಳ್ಳಲಾಗುತ್ತಿದೆ.ಇನ್ನೂ, ಕಾರ್ಮಿಕರ ಬದುಕು ಕಷ್ಟಕರ ವಾಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಾಮಾಜಿಕ ಹೋರಾಟಗಾರ ಡಾ.ಸಿ.ಎಸ್.ದ್ವಾರಕನಾಥ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಬಿಎಸ್‍ಎನ್‍ಎಲ್ ಬಿಟ್ಟು, ಖಾಸಗಿ ಸಂಸ್ಥೆಯ ಜೀಯೋ ಸಂಪರ್ಕ ಕ್ಕಾಗಿ ದುಡಿದರು.ಇದು, ದೇಶ ಪ್ರೇಮವೇ, ಅದು ಅಲ್ಲದೆ, ಜಿಎಸ್ಟಿ ಹೆಸರಿನಲ್ಲಿ ಸುಲಿಗೆ ಮಾಡಿ, ನಮಗೆ ಏನು ನೀಡಿದೆ ಎಂದು ಪ್ರಶ್ನೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಂಪೆನಿ ಸರ್ಕಾರ. ಸ್ವಾತಂತ್ರ್ಯ ಇಲ್ಲದಿದ್ದಾಗ, ನಾವು ಬ್ರಿಟಿಷ್ ಕಂಪೆನಿಗೆ ಕಪ್ಪ ಕಾಣಿಕೆ ನೀಡಬೇಕಿತ್ತು.ಆದರೆ, ಇದೀಗ, ಹತ್ತಾರು ಕಂಪೆನಿಗಳು ಇದ್ದು, ಅವರಿಗೂ ಈ ಮೋದಿ ಸರ್ಕಾರ ಕಪ್ಪ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಮಾತನಾಡಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಯಾದ ಧ್ವನಿಗೂಡಿಸಿದ್ದೇ.ಬಳಿಕ, ಕೆಲವರಿಂದ ಪ್ರಾಣ ಬೆದರಿಕೆ ಕರೆ ಬಂದಿತು.ಇದಾದ ಬಳಿಕ, ಇನ್ನಷ್ಟು ಧ್ವನಿಗೂಡಿಸಿದೆ. ಅಲ್ಲದೆ, ಹಿಂದುತ್ವ ಎಂದರೆ, ಅರಾಜಕತೆ ಅಲ್ಲ. ಬದಲಾಗಿ, ಎಲ್ಲರೊಂದಿಗೆ ಪ್ರೀತಿಯಿಂದ ಬಾಳುವುದು ಎಂದರು.
ಮೂಲ ಸಂಸ್ಕೃತಿ ಉಳಿಸಿ
ರಾಜಕಾರಣಿಗಳ ಹಿಂದುತ್ವ ಸಿದ್ದಾಂತದಿಂದ ನಮ್ಮ ದೇಶ ಪಾಕಿಸ್ತಾನದ ಆಗುವುದು ಬೇಡ. ಈ ಭಾರತದ ಮೂಲ ಸಂಸ್ಕೃತಿ ಉಳಿಸುವುದು ಎಂದ ಅವರು, ಭಾರತ ಜಾತ್ಯಾತೀತವಾಗಿದೆ. ಆದರೆ, ಪಾಕಿಸ್ತಾನ ಮತಂಧೆಯಿಂದ ಹಿಂದುಳಿದಿದೆ ಎಂದು ಪ್ರತಿಪಾದಿಸಿದರು.ನಕಲಿ ಹಿಂದುತ್ವ ನಂಬಿ, ಹೋರಾಟ ಮಾಡಿ, ಪೊಲೀಸ್ ಠಾಣೆಗಳಲ್ಲಿ ಕೇಸು ಹಾಕಿಸಿಕೊಳ್ಳುತ್ತಾರೆ. ಆದರೆ, ಖುಲಾಸೆ ಆಗಲು, ಸಂಘ ಪರಿವಾರ ಅವರು ಸಹಾಯ ಮಾಡುವುದಿಲ್ಲ.ಬರೀ ಅವರ ಲಾಭ ಪಡೆಯುತ್ತಾರೆ ಎಂದು ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಆರೋಪಿಸಿದರು.ಸಂವಾದದಲ್ಲಿ ಬಹುಭಾಷ ನಟ, ಚಿಂತಕ ಪ್ರಕಾಶ್ ರೈ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ,ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಇಕ್ಬಾಲ್ ಅಹ್ಮದ್ ಶರೀಫ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








