ವಿಮಾನ ಪತನ : ಎಲ್ಲಾ 157 ಮಂದಿ ಸಾವು!!!

ನೈರೋಬಿ:
       149 ಮಂದಿ ಪ್ರಯಾಣಿಕರು ಹಾಗೂ 8 ಮಂದಿ ಸಿಬ್ಬಂದಿಯಿದ್ದ ಇಥಿಯೋಪಿಯಾದ ವಿಮಾನವೊಂದು ದುರಂತಕ್ಕೀಡಾಗಿದ್ದು, ಎಲ್ಲ ಪ್ರಯಾಣಿಕರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
      ಅಡ್ಡಿಸ್ ಅಬಾಬದಲ್ಲಿರುವ ಬೋಲೆ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಬೆಳಗ್ಗೆ 8.38ರ ಸುಮಾರಿಗೆ ಹೊರಟ ವಿಮಾನ 8.44ರಲ್ಲಿ ಸಂಪರ್ಕ ಕಳೆದುಕೊಂಡಿತ್ತು ಎಂದು ಏರ್‌ಲೈನ್ಸ್ ತಿಳಿಸಿದೆ. 
      ‘ವಿಮಾನದಲ್ಲಿ 33 ದೇಶಗಳಿಗೆ ಸೇರಿದ ಪ್ರಯಾಣಿಕರಿದ್ದರು. ದುರಂತಕ್ಕೀಡಾದ ವಿಮಾನದಲ್ಲಿ ಯಾರೊಬ್ಬರೂ ಬದುಕಿ ಉಳಿದಿರುವ ಸಾಧ್ಯತೆ ಇಲ್ಲ’ ಎನ್ನಲಾಗಿದೆ

       ವಿಮಾನ ಪತನವಾಗಲು ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಪಘಾತದಲ್ಲಿ ಬದುಕುಳಿದಿರುವವರಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಇಥಿಯೋಪಿಯಾ ಏರ್​ಲೈನ್ಸ್​ನ ಅಧಿಕಾರಿಗಳು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link