ಅನೈತಿಕ ಚಟುವಟಿಕೆಗಳ ತಾಣವಾದ ಹೊಳವನಹಳ್ಳಿ ಸರ್ಕಾರಿ ಶಾಲೆ…!!

ಕೊರಟಗೆರೆ:-

         ಹೊಳವನಹಳ್ಳಿ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದಅದೆಷ್ಟೊ ವಿದ್ಯಾರ್ಥಿಗಳು ಇಂದು ದೇಶದಲ್ಲೇ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಇಂತಹ ಶಾಲೆಯ ಆವರಣದಲ್ಲಿ ಪ್ರತಿದಿನ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

       ಹೋಬಳಿ ಕೇಂದ್ರ ಸ್ಥಾನದಲ್ಲಿ ಇರುವ ಹೊಳವನಹಳ್ಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಓದಿದ ವಿಧ್ಯಾರ್ಥಿಗಳು ಇಂದು ಐಎಎಸ್ ಹಾಗೂ ಐಪಿಎಸ್‍ ಅಂತಹ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಇಂತಹ ಶಾಲೆಯನ್ನ ಉಳಿಸಿ ಬೆಳಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರೀಕನ ಮತ್ತು ಶಾಲೆಯ ಶಿಕ್ಷಕರ ಹಾಗೂ ಮುಖ್ಯ ಶಿಕ್ಷಕರ ಕರ್ತವ್ಯವಾಗಿದ್ದು, ಶಾಲೆಯ ಅವಧಿ ಮುಗಿದ ನಂತರ ಶಾಲೆಯ ಮುಖ್ಯ ಶಿಕ್ಷಕರು ಗೇಟ್ ಬೀಗ ಹಾಕಿಕೊಂಡು ಹೋಗುವುದಿಲ್ಲ ಅದ್ದರಿಂದ ಸಂಜೆಯಾದ ತಕ್ಷಣ ಶಾಲೆಯ ಅವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವುದಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರ ಅಸಮದಾನಕ್ಕೆ ಕಾರಣವಾಗಿದೆ.

      ಶಾಲೆಯ ಆವರಣದಲ್ಲಿ ಹೆಚ್ಚಾಗಿ ಗಲೀಜು ಮಾಡಿ, ಇಲ್ಲಿನ ವಾತಾವರಣ ಹಾಳು ಮಾಡವುದರಿಂದ ಯಾವ ಪೋಷಕರು ತಮ್ಮ ಮಕ್ಕಳನ್ನ ಸರಕಾರಿ ಶಾಲೆ ಕಳಿಸಲು ಇಷ್ಟ ಪಡುತ್ತಾರೆ.ಶಾಲೆಯ ಅವಧಿ ಮುಗಿಯುತ್ತೀದ್ದಂತೆ ಮಾದಕ ವ್ಯಸನಿಗಳು, ಕುಡಕರು, ಪುಂಡರ ದಂಡು ಶಾಲೆಯೊಳಗೆ ಬರುವುದು ಸಾಮಾನ್ಯವಾಗಿದೆ. ರಾತ್ರಿ ವೇಳೆಯಲ್ಲಿ ಯುವಕರು ಇಲ್ಲಿಯೇ ಕುಡಿದ ಬಾಟಲಿಗಳನ್ನ ಎಸೆಯುತ್ತಾರೆ .

      ಇನ್ನೂ ಕಟ್ಟಡದ ಹೆಂಚು, ಕಿಟಕಿ, ಬಾಗಿಲುಗಳನ್ನ ಪೋಲಿ ಯುವಕರುಪುಡಿಪುಡಿ ಮಾಡಿದ್ದಾರೆ.ಶಾಲೆಯ ಅವರಣದಲ್ಲಿ ಎಣ್ಣೆ ಬಾಟಲಿ,ಮಾದಕ ವಸ್ತುಗಳು ಹಾಗೂ ಉಪ್ಪಿನಕಾಯಿ ಪ್ಯಾಕೇಟ್‍ಗಳು ಶಾಲೆಯ ಕೊಠಡಿಯ ಮುಂದೆ ಕಣ್ಣಿಗೆ ಕಾಣಿಸುತ್ತವೆ. ಇಷ್ಟೇಲ್ಲ ಪ್ರತಿನಿತ್ಯ ನೋಡುತ್ತಿದ್ದರು ಇಲ್ಲಿನ ಶಿಕ್ಷಕರು ಹಾಗೂ ಸಿಬ್ಬಂದಿಗಳು ನನಗೂ ಇದಕ್ಕೂ ಸಂಭಂದ ಇಲ್ಲ ಎನ್ನುವ ಹಾಗೆ ಕೆಲಸ ಮಾಡುತ್ತೀದ್ದಾರೆ.ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಯಿಂದ ಪೋಷಕರು ಖಾಸಗಿ ಶಾಲೆ ಕಡೆ ಮುಖ ಮಾಡುತ್ತೀರುವುದು ಇಲ್ಲಿನ ಸ್ವಚ್ಛತೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ನೀಡದೇ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳು ಯಾಕೆ ಮುಚ್ಚುತಾರೆ ಎಂದರೆ ಇದಕ್ಕೆ ಇರಬೇಕುಎಂದು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

      ಕಿಡಿಗೇಡಿಗಳಿಂದ ಸಸಿಗಳು ನಾಶ

       ಶಾಲಾ ಅವರಣದಲ್ಲಿ ಮಕ್ಕಳಿಗೆ ಉತ್ತಮ ವಾತವರಣ ನಿರ್ಮಾಣ ಮಾಡುವುದಕ್ಕಾಗಿ ನೂರಕ್ಕೂ ಹೆಚ್ಚು ಸಸಿಗಳನ್ನ ನೆಡಲಾಗಿದ್ದು ಅವುಗಳಲ್ಲಿ ಕೆಲವು ಸಸಿಗಳು ಬೆಳೆದರೆ ಸುಮಾರು 30ಕ್ಕೂ ಹೆಚ್ಚು ಸಸಿಗಳು ಪೋಲಿ ಯುವಕರು ಅರ್ಧಕ್ಕೆ ಮುರಿದು ಹಾಕಿದ್ದಾರೆ. ಪ್ರತಿನಿತ್ಯ ಶಾಲೆ ಮುಗಿದ ನಂತರ ಪೋಲಿಗಳನ್ನ ತಡೆಯುವಲ್ಲಿ ಅಧಿಕಾರಿಗಳು ಸಂರ್ಪೂಣ ವಿಫಲರಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap