ತಪೋಕ್ಷೇತ್ರ ಕಗ್ಗೆರೆ ಶ್ರೀ ಸಿದ್ಧಲಿಂಗೇಶ್ವರರ ಮಹಾರಥೋತ್ಸವ

ಕುಣಿಗಲ್

        ತಾಲ್ಲೂಕಿ ಐತಿಹಾಸಿಕ ಸುಪ್ರಸಿದ್ಧ ಕಗ್ಗೆರೆ ತಪೋಕ್ಷೇತ್ರದಲ್ಲಿ ವಿರಾಜಮಾನರಾಗಿ ನೆಲೆಸಿರುವ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಸನ್ನೀಧಿಯಲ್ಲಿ ನಾಳೆ ಮಧ್ಯಾಹ್ನ ವಿಜೃಂಭಣೆಯ ಮಹಾರಥೋತ್ಸವ ಜರುಗಲಿದೆ.

        ಸನ್ನಿಧಿಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು-ಶರಣರುಗಳು ಆಗಮಿಸಲಿದ್ದಾರೆ. ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಸಿದ್ಧಲಿಂಗೇಶ್ವರರಿಗೆ ವಿವಿಧ ಪೂಜಾದಿಕಾರ್ಯಗಳೊಂದಿಗೆ ಶ್ರೀಗಳ ಸಮ್ಮುಖದಲ್ಲಿ ಮಹಾರಥೋತ್ಸ ಅದ್ದೂರಿಯಾಗಿ ಜರುಗಲಿದೆ. ಮಹಾ ರಥೋತ್ಸವದ ಪ್ರಯುಕ್ತ ದೇವಾಲಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ
ಪ್ರತಿ ವರ್ಷದಂತೆ ಈ ಬಾರಿಯೂ ಸಹ ದೇವಾಲಯವನ್ನುವಿವಿಧ ಬಗೆಯ ಫಲಪುಷ್ಪಗಳಿಂದ ಶೃಂಗರಿಸಿ ಸನ್ನಿಧಿಗೆ ಬರುವ ಭಕ್ತರ ಕಣ್‍ತುಂಬಲು ಸಿದ್ದಗೊಂಡಿದೆ. ಭಕ್ತರಿಗೆ ವಾಹನ ನಿಲ್ದಾಣ ಕುಡಿಯುವ ನೀರು ಶೌಚಾಲಯ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ದೇವಾಲಯದ ವತಿಯಿಂದ ಕಲ್ಪಿಸಲಾಗಿದೆ.

       ವಾಹನ ನಿಲ್ದಾಣ ದಟ್ಟಣೆಯನ್ನು ತಡೆಗಟ್ಟಲು ಮತ್ತು ಸುಗಮ ಸಂಚಾರಕ್ಕಾಗಿ ಪೊಲೀಸರ ಸಹಕಾರದಿಂದ ಮಾರ್ಗಸೂಚಿ ತಯಾರಿಸಲಾಗಿದೆ. ಶ್ರೀ ಸಿದ್ಧಲಿಂಗೇಶ್ವರರ ಪರಮ ಭಕ್ತಕುಲ ಪ್ರತಿ ವರ್ಷದಂತೆ ಈ ಬಾರಿಯು ರಥೋತ್ಸವ ಜರುಗಿದ ನಂತರ ಉಚಿತವಾಗಿ ಮಜ್ಜಿಗೆ, ಪಾನಕ, ಕೋಸಂಬರಿ, ಊಟದ ವ್ಯವಸ್ಥೆಯನ್ನು ತಮ್ಮ ಅರವಂಟಿಗೆಯ ಮೂಲಕ ನೀಡತ್ತ ಬಂದಿರುವುದು ಸಹಸ್ರಾರು ಭಕರ ಮೆಚ್ಚಿಗೆಗೆ ಪಾತ್ರವಾಗಿದೆ. ಅಲ್ಲದೆ ನಿತ್ಯ ನಡೆಯುವ ಇಲ್ಲಿನ ದಾಸೋಹ ಸೇವಾ ಸಮಿತಿ ವತಿಯಿಂದ ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಕೂಡ ವ್ಯವಸ್ಥಿತವಾಗಿ ಮಾಡಿದೆ. ಅಲ್ಲದೆ ದಾಸೋಹ ಸಂಸ್ಥೆ ಭಕ್ತರ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿದೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link