ಬೆಳಗಾವಿ:
ದಾಖಲೆರಹಿತ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬೆಳ್ಳಿ ಆಭರಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ನೆನ್ನೇ ರಾತ್ರಿ ವಶಕ್ಕೆ ಪಡೆಯಲಾಗಿದೆ.
ಅಪಾರ ಪ್ರಮಾಣದ ಬೆಳ್ಳಿ ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ರಾಜೇಂದ್ರಕುಮಾರ್ ಜೈನ್ ಎಂಬಾತನನ್ನು ಕುಗನೋಳಿ ಚೆಕ್ ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ದಾಖಲೆ ರಹಿತವಾಗಿ 11.82 ಲಕ್ಷ ರೂಪಾಯಿ ಮೌಲ್ಯದ 30.32 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.
ಕಾರಿನಲ್ಲಿ ಕೊಲ್ಲಾಪುರದಿಂದ ರಾಣೆಬೆನ್ನೂರಿಗೆ ಬೆಳ್ಳಿ ಸಾಗಿಸಲಾಗುತ್ತಿತ್ತು. ಪರಿಶೀಲನೆ ವೇಳೆ ಬೆಳ್ಳಿ ಸಾಗಣೆ ಸಂಬಂಧ ಯಾವುದೇ ದಾಖಲೆ ಸಿಕ್ಕಿಲ್ಲ. ಜಿಲ್ಲೆಯ ಪೊಲೀಸರು ಪ್ರಕರಣವನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ