ಭಾರತದಲ್ಲಿ ಬೋಯಿಂಗ್ 737 ಮ್ಯಾಕ್ಸ್ ಹಾರಾಟ ನಿಷೇಧ..!!!

ನವದೆಹಲಿ:

            ಕೆಲ ದಿನಗಳ ಹಿಂದೆ ಇಥಿಯೋಪಿಯಾದಲ್ಲಿ 157 ಪ್ರಯಾಣಿಕರ ಧಾರುಣ ಸಾವಿಗೆ ಕಾರಣವಾದ ಬೋಯಿಂಗ್ 737 ಮ್ಯಾಕ್ಸ್ ಮಾದರಿಯ ವಿಮಾನವನ್ನು ಭಾರತ ಸೇರಿದಂತೆ ಇನ್ನೂ ಇತರೆ ದೇಶಗಳು ನಿಷೇಧ ಹೇರಿವೆ .

          ಇದಕ್ಕೆ ಕಾರಣ ಬೋಯಿಂಗ್ 737 ಮ್ಯಾಕ್ಸ್ ಮಾದರಿಯ ವಿಮಾನಗಳು ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದು ಈ ಹಿಂದೆ ಬ್ರಿಟನ್, ಜರ್ಮನಿ, ಫ್ರಾನ್ಸ್, ಸಿಂಗಾಪುರ, ಆಸ್ಟ್ರೇಲಿಯಾ, ಮಲೇಷ್ಯಾ, ಚೀನಾ ಮತ್ತು ಒಮನ್ ರಾಷ್ಟ್ರಗಳು ಈ ಕಾರಣದಿಂದಲೇ ಈ ಮಾದರಿಯ ವಿಮಾನಗಳನ್ನು ನಿಷೇಧ ಮಾಡಿದ್ದವು.ಅಂತೆಯೇ ಇಥಿಯೋಪಿಯಾ ದುರಂತದ ಬೆನ್ನಲ್ಲೇ ಬೋಯಿಂಗ್ ಸಂಸ್ಥೆ ಈ ವಿಮಾನದ ತಾಂತ್ರಿಕ ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದೆ.

        ಬೋಯಿಂಗ್ ಸಂಸ್ಥೆ ಕೂಡ ಈ  ವಿಮಾನ ತುರ್ತು ಸುಧಾರಣೆ ಮಾಡಲು  ಆದೇಶ ನೀಡಿದೆ. ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇನ್ನೂ ಭಾರತದಲ್ಲಿ ಈ ಮಾದರಿಯ ವಿಮಾನಗಳನ್ನು ಹೊಂದಿರುವ  ವಿಮಾನ ಹಾರಾಟ ಸಂಸ್ಥೆಗಳು ಸಹ ಹಾರಾಟ ನಿಲ್ಲಿಸಿವೆ ಎಂದು ತಿಳಿದು ಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link