7 ಜನರಿಂದ ರೌಡಿ ಇಸ್ಮಾಯಿಲ್ ಕೋಲೆ..!!

ಬೆಂಗಳೂರು

         ಬಂಡೆಪಾಳ್ಯದ ಕುಖ್ಯಾತ ರೌಡಿ ಇಸ್ಮಾಯಿಲ್‍ನನ್ನು 7 ಮಂದಿ ದುಷ್ಕರ್ಮಿಗಳು ಮಚ್ಚು, ಲಾಂಗ್‍ಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ದುರ್ಘಟನೆ ಹೊಸೂರು ಬಳಿಯ ಡೆಂಕಣಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

        ಡೆಂಕಣಿಕೋಟೆ ಬಳಿ ಸ್ನೇಹಿತನ ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ಬೊಮ್ಮನಹಳ್ಳಿಯ ಇಸ್ಮಾಯಿಲ್ (30)ನನ್ನು ಮಂಗಳವಾರ ಮಧ್ಯಾಹ್ನ 7 ಮಂದಿ ದುಷ್ಕರ್ಮಿಗಳು ಹಿಂಬಾಲಿಸಿ, ಅಡ್ಡಗಟ್ಟಿ ಮಚ್ಚು, ಲಾಂಗ್‍ಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

         ಇಸ್ಮಾಯಿಲ್ ತಮಿಳುನಾಡಿನ ಡೆಂಕಣಿಕೋಟೆಯ ತನ್ನ ಸ್ನೇಹಿತ ಬಶೀರ್ ಮನೆಗೆ ನಿನ್ನೆ ಮಧ್ಯಾಹ್ನ ಕಾರಿನಲ್ಲಿ ಹೋಗುತ್ತಿದ್ದಾಗ ಸಂಚು ರೂಪಿಸಿ, ಆತನನ್ನು ಹಿಂಬಾಲಿಸಿಕೊಂಡು ಇನ್ನೋವಾ ಕಾರಿನಲ್ಲಿ ಬಂದಿದ್ದ 7 ಜನ ದುಷ್ಕರ್ಮಿಗಳು ಬಶೀರ್ ಮನೆಯಲ್ಲೇ ಲಾಂಗು, ಮಚ್ಚುಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ.

        ಈ ವೇಳೆ ಬಶೀರ್ ಮನೆಯಲ್ಲಿದ್ದ ಮಹಿಳೆಯರು ಗಾಬರಿಗೊಂಡು ಮನೆಬಿಟ್ಟು ಹೊರಹೋಗಿದ್ದಾರೆ. ದುಷ್ಕರ್ಮಿಗಳು ಮಂಕಿ ಕ್ಯಾಪ್ ಹಾಕಿಕೊಂಡಿದ್ದರು. ಹೀಗಾಗಿ ಕೊಲೆ ಮಾಡಿದವರು ಯಾರು ಎನ್ನುವುದು ಮನೆಯಲ್ಲಿದ್ದವರಿಗೆ ತಿಳಿದಿಲ್ಲ. ಕೊಲೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆಂದು ಸ್ಥಳದಲ್ಲಿದ್ದ ಮಹಿಳೆಯರು ತಿಳಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

       ಇಸ್ಮಾಯಿಲ್ ಕೊಲೆಗೆ ಕಳೆದ ಕೆಲವು ದಿನಗಳಿಂದ ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ಹೀಗಾಗಿ ಇಂದು ಆತನನ್ನು ಹಿಂಬಾಲಿಸಿ ಕೃತ್ಯ ಎಸಗಿದ್ದಾರೆ. ಘಟನಾ ಸ್ಥಳದಲ್ಲೇ ಲಾಂಗ್ ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

         ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡೆಂಕಣಿಕೋಟೆ ಪೊಲೀಸರು, ಸ್ಥಳವನ್ನು ಮಹಜರು ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬೆನ್ನಲ್ಲೇ ಐವರು ಆರೋಪಿಗಳು ಶರಣಾಗಿದ್ದು, ಅವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ