ಬೆಂಗಳೂರು:
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕಣ್ಣೀರಿಗೆ ರಾಜಕೀಯ ನಾಯಕರು ಲೇವಡಿ ಮಾಡುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಮಂಡ್ಯದ ಜನರು ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ. ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಸಮಾವೇಶ ನಡೆಯಲಿದೆ. ಅಲ್ಲಿ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ. ಮಂಡ್ಯದಲ್ಲಿ ಮಳೆ ಗ್ಯಾರಂಟಿ. ಹಾಸನದ ನಂತರ ಮಂಡ್ಯದಲ್ಲಿ ಡ್ರಾಮಾ ಪ್ರಾರಂಭ ಎಂದು ಲೇವಡಿ ಮಾಡಿದ್ದಾರೆ.ಗಂಡು ಮೆಟ್ಟಿದ ಮಂಡ್ಯದಲ್ಲಿ ಗಂಡಸರು ಅಳುವ ಕಾರ್ಯಕ್ರಮ. ಮೂರು ತಲೆಮಾರಿನ ಕಣ್ಣೀರು ಸುಂದರ ಸಾಮಾಜಿಕ ನಾಟಕ ಎಂಬಿತ್ಯಾದಿ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದು, ಕೆಲವರು ಪರವಾಗಿ ಮತ್ತೆ ಕೆಲವರು ವಿರುದ್ಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ.