ಚಿತ್ರದುರ್ಗ;
ಹಿರಿಯ ಕಾಂಗ್ರೆಸ್ ಮುಖಂಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎ.ಸೇತುರಾಮ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಸುಮಾರು ಐವತ್ತು ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್‍ನಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸಿದ್ದ ಸೇತುರಾಮ್ ಅವರ ಈ ನಿರ್ದಾರದಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಅವರೊಟ್ಟಿಗೆ ಮತ್ತೊಬ್ಬ ಪ್ರಭಾವಿ ಯುವ ಮುಖಂಡ ಡಾ.ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರೂ ಸಹ ಪಕ್ಷ ತೊರೆದಿರುವುದು ಕಾಂಗ್ರೆಸ್ ಪಾಲಿಗೆ ದೊಡ್ಡ ಆಘಾತವೆಂದೇ ಹೇಳಬಹುದು.
ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಪಕ್ಷಕ್ಕೆ ಶ್ರಮಿಸಿದ್ದ ಸೇತುರಾಮ್ ಅವರನ್ನು ಇತ್ತೀಚಿನ ವರ್ಷಗಳಲ್ಲಿ ಕಡೆಗಣಿಸಲಾಗಿತ್ತು. ಹೆಚ್.ಆಂಜನೇಯ ಅವರು ಸಚಿವರಾದ ಬಳಿಕ ಇಡೀ ಕಾಂಗ್ರೆಸ್ ಪಕ್ಷದ ಮೇಲೆ ಹಿಡಿತಸಾಧಿಸಲು ಯತ್ನಿಸಿದ್ದರು. ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೇತುರಾಮ್ ಅವರನ್ನು ಹುದ್ದೆಯಿಂದ ಕಿತ್ತೊಗೆಯಲಾಗಿತ್ತು.ಇದು ಸೇತುರಾಮ್ ಮತ್ತು ಆಂಜನೇಯ ಅವರ ಮದ್ಯೆ ರಾಜಕೀಯ ವೈರತ್ವ ಬೆಳೆಯಲು ಮುಖ್ಯ ಕಾರಣ ಎನ್ನಲಾಗುತ್ತಿದೆ.
ಸುಮಾರು ಮೂರು ದಶಕಗಳ ಕಾಲ ಜಿಲ್ಲಾ ಕಾಂಗ್ರೆಸ್‍ನ ಖಜಾಂಚಿಯಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿಯೂ ಸೇತುರಾಮ್ ಅವರು ಪಕ್ಷದಲ್ಲಿ ಸೇವೆ ಸಲ್ಲಿಸಿದ್ದರು. ಒಮ್ಮೆ ವಿಧಾನ ಪರಿಷತ್ ಚುನಾವಣೆಗೂ ಸ್ಪರ್ದಿಸಿದ್ದರು. ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರ ಜೊತೆ ಉತ್ತಮ ಒಡನಾಟ ಹೊಂದಿರುವ ಸೇತುರಾಮ್ ಅವರು ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಬೆಸೆತ್ತು ರಾಜೀನಾಮೆ ನೀಡಿದ್ದಾರೆ
ಲೋಕಸಭೆ ಚುನಾವಣೆಯ ಈ ಹೊತ್ತಿನಲ್ಲಿ ಈ ಇಬ್ಬರು ನಾಯಕರು ಪಕ್ಷದಿಂದ ದೂರ ಸರಿಯುತ್ತಿರುವುದು ಚುನಾವಣಾ ಫಲಿತಾಂಶದ ಮೇಲೆಯೂ ಗಾಢ ಪರಿಣಾಮ ಬೀರುವುದನ್ನು ಅಲ್ಲಗೆಳೆಯುವಂತಿಲ್ಲ.
ಒಮ್ಮೆ ಲೋಕಸಭೆಗೆ ಸ್ಪರ್ದಿಸಿದ್ದ ಡಾ.ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರು ಈ ಬಾರಿಯೂ ಟಿಕೆಟ್ ಅಕಾಂಕ್ಷಿಯಾಗಿದ್ದರು. ಎಚ್.ಆಂಜನೇಯ ಅವರ ಬದ್ಧ ವಿರೋಧಿ ಆಗಿದ್ದರು.ಪಕ್ಷ ಸಂಃಟನೆಯಲ್ಲಿ ಹಿಡಿತ ಸಾಧಿಸಿದ್ದ ವ್ಯಕ್ತಿ.ಆದರೆ ಎಚ್.ಆಂಜನೇಯ ಇವರನ್ನು ಗಣನೀಯವಾಗಿ ಕಡೆಗಣಿಸಿದ್ದರು. ಇದರಿಂದ ತುಂಬಾ ದಿನಗಳಿಂದ ಅಸಮಾಧಾನದ ಹೊಗೆಯಾಡುತ್ತಲೇ ಇತ್ತು.
ಜೆಜೆಹಟ್ಟಿ ತಿಪ್ಪೇಸ್ವಾಮಿ, ವಿದ್ಯಾರ್ಥಿ ಕಾಂಗ್ರೆಸ್ಸಿನಿಂದಲೂ ಪಕ್ಷ ಸಂಘಟನೆಯಲ್ಲಿದ್ದವರು. ರಾಹುಲ್ ಗಾಂಧಿಯವರ ಆಪ್ತವಲಯದಲ್ಲಿ ಗರ್ತಿಸಿಕೊಂಡಿದ್ದರ ಜತೆಗೆ 2009 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡೂವರೆ ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದರು.
ಅಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಿದ್ದೆವು.ಜಿಲ್ಲೆ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಅಂದಿನ ದಿನಗಳಲ್ಲಿ ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಮುನ್ನಡೆಸಿದ್ದೆವು.2014ರಲ್ಲಿ ನಾನು ಗೆಲ್ಲುವ ಅವಕಾಶಗಳು ಸಾಕಷ್ಟಿದ್ದವು. ಉದ್ದೇಶಪೂರ್ವಕವಾಗಿ ನನಗೆ ಸಿಗದಂತೆ ನೋಡಿಕೊಂಡರು.
ಈಗ ಸುಮಾರು ನಾಲ್ಕುವರೆ ಲಕ್ಷಕ್ಕಿಂತ ಅಧಿಕ ಮತದಾರಿರುವ ನಮಗೆ ಟಿಕೆಟ್ ತಪ್ಪಿಸಿದರು. ಜಿಲ್ಲೆಯ ಎಲ್ಲಾ ವರ್ಗದ ಕಾರ್ಯಕರ್ತರು ಸ್ಥಳೀಯತೆಯ ಮಂತ್ರ ಜಪಿಸುತ್ತಿರುವಾಗ ಆಂಜನೇಯ ಹೊರಗಿನವರಿಗೆ ಮಣೆ ಹಾಕಿ ಕಾಂಗ್ರೆಸ್ ಪಕ್ಷವನ್ನು ಅವನತಿಯ ಹಾದಿಯತ್ತ ಕೊಂಡೊಯ್ದರು. ಅಧಿಕಾರಕ್ಕೆ ಬಂದ ನಂತರ ಸರ್ವಾಧಿಕಾರಿಯಂತೆ ದುರಾಡಳಿತ ನಡೆಸಿದರು ಎಂದು ತಿಳಿಸಿದರು. ಇನ್ನೆರಡು ದಿನಗಳಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಡೆ ತೀರ್ಮಾನಿಸಲಾಗುವುದು ಎಂದು ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ