ಪಣಜಿ:
ಗೋವಾ ಸಿಎಂ ದಿ. ಮನೋಹರ್ ಪರಿಕ್ಕರ್ ಅವರ ಅಂತ್ಯ ಸಂಸ್ಕಾರವನ್ನು ಇಂದು ಸಂಜೆ 5 ಗಂಟೆಗೆ ಪಣಜಿಯಲ್ಲಿ ನೆರವೇರಿಸಲಾಗುತ್ತದೆ.

ಭಾನುವಾರ ವಿಧಿವಶರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅಂತ್ಯಕ್ರಿಯೆ ಇಂದು ನೆರವೇರಲಿದೆ. ಭಾನುವಾರ ಸಂಜೆ 06:40ಕ್ಕೆ ವಿಧಿವಶರಾದರು
ಅವರ ಅಂತಿಮ ಸಂಸ್ಕಾರ ಮಿರಾಮಾರ್ ನಲ್ಲಿ ನೆರವೇರಿಸಲಾಗುತ್ತದೆ ಎಂದು ಬಿಜೆಪಿ ಮುಖಂಡರು ಮಾಹತಿ ನೀಡಿದ್ದಾರೆ.
ಪರಿಕರ್ ಪಾರ್ಥಿವ ಶರೀರವನ್ನು ಸೋಮವಾರ ಬೆಳಿಗ್ಗೆ 9:00 ರಿಂದ 10:30ರವರೆಗೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇರಿಸಲಾಗುವುದು. ಬಳಿಕ ಸಂಜೆ 4 ಗಂಟೆವರೆಗೆ ಪಣಜಿಯ ಕಲಾ ಅಕಾಡೆಮಿಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ, ಸಕಲ ಗೌರವಗಳೊಂದಿಗೆ ಪರಿಕ್ಕರ್ ಅವರ ಅಂತಿಮ ಯಾತ್ರೆ ಮೆರವಣಿಗೆ ಮೂಲಕ ನಡೆಯಲಿದ್ದು, ಸಂಜೆ 5 ಗಂಟೆಗೆ ಪಣಜಿಯಲ್ಲಿರುವ ಮೀರಾಮಾರ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಇನ್ನು ಪರಿಕ್ಕರ್ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
