
ಸಂಕ್ವಿಲಿಂ ಕ್ಷೇತ್ರದಿಂದ ಆಯ್ಕೆಯಾದ ಸಾವಂತ್ ಅವರು 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೂದಲ ಬಾರಿ ಆಯ್ಕೆಯಾದ ಸಾವಂತ್ ಮೂಲತಃ ಆಯುರ್ವೇದಿಕ್ ವೈದ್ಯ. ಬಿಜೆಪಿಯ ಯುವ ಮೋರ್ಚಾದಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ದಿಢೀರ್ ಅವಕಾಶ ಒಲಿದುಬಂದು ಸಂಕ್ವಿಲಿನ್ ಕ್ಷೇತ್ರದಿಂದ ಆಯ್ಕೆಯಾದರು.
ಎಲ್ಲ ಪಕ್ಷಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಾವಂತ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು. ಇನ್ನೂ ವೃತ್ತಿಯಲ್ಲಿ ರಾಸಾಯನಿಕ ಶಾಸ್ತ್ರ ಶಿಕ್ಷಕಿಯಾಗಿರುವ ಅವರ ಪತ್ನಿ ಸುಲಕ್ಷಣ ಅವರು ಸದ್ಯ ಬಿಜೆಪಿ ಮಹಿಳಾ ಮೋರ್ಚದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.








