ತುಮಕೂರು:

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಗಂಗೆ ಶಾಪ ಇದೆ. ಅವರು ತುಮಕೂರಿನಿಂದ ಸ್ಪರ್ಧಿಸಿದರೆ ಸೋಲು ಖಚಿತ ಎಂದು ತುಮಕೂರು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಭವಿಷ್ಯ ನುಡಿದಿದ್ದಾರೆ.
ಗಂಗೆ ಶಾಪವು ದೇವೇಗೌಡರನ್ನು ಬೆಂಬಿಡದೆ ಕಾಡುತ್ತಿದೆ. ಗಂಗೆ ಶಾಪದ ಬಗ್ಗೆ ಈಗಾಗಲೇ ಜ್ಯೋತಿಷಿಗಳು ಹೇಳಿದ್ದಾರೆ. ಗಂಗೆ ಶಾಪವಿರುವ ಬಗ್ಗೆ ದೇವೇಗೌಡರಿಗೂ ಗೊತ್ತು. ಅದರ ಜೊತೆಗೆ 09 ಸಂಖ್ಯೆ ಅವರಿಗೆ ಅಪಶಕುನ. ಅಲ್ಲದೇ, ತುಮಕೂರಿಗೆ ಹೇಮಾವತಿ ನೀರು ಕೊಡದೆ ವಂಚಿಸಿದರು. ರೈತರ ಕಣ್ಣೀರಿನ ಶಾಪವೂ ತಟ್ಟಲಿದ್ದು, ತುಮಕೂರಿನಿಂದ ಅವರು ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.
ತುಮಕೂರಿನ ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾಗಿರುವ ಸುರೇಶ್ ಗೌಡ, ತುಮಕೂರು ಕ್ಷೇತ್ರದಲ್ಲಿ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಪಟ್ಟಿಯಲ್ಲಿ ನನ್ನ ಹೆಸರೂ ಇದೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ನನ್ನ ಪರ ಹೆಚ್ಚಿನವರು ಒಲವು ತೋರಿಸಿದ್ದಾರೆ. ಅಲ್ಲದೆ, ನಾನು ಯಡಿಯೂರಪ್ಪ ಅವರ ಶಿಷ್ಯ ಎಂಬುದು ಜನರಿಗೆ ಗೊತ್ತು. ಹೀಗಾಗಿ ನನಗೇ ಟಿಕೆಟ್ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








