ಪಾಕ್ ಗೆ ಖಡಕ್ ಎಚ್ಚರಿಕೆ ನೀಡಿದ ದೋವೆಲ್..!!!

ನವದೆಹಲಿ:  

          ಉಗ್ರರು ಹಾಗೂ ಅವರಿಗೆ ಬೆಂಬಲ ನೀಡುವವರಿಗೆ ಮತ್ತೊಮ್ಮೆ ಕಠಿಣವಾಗಿಯೇ ಪ್ರತ್ಯುತ್ತರ ನೀಡುತ್ತೇವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

          ಗುರುಗ್ರಾಮನಲ್ಲಿ ನಡೆದ ಸಿಆರ್‍ಪಿಎಫ್ ನ 80ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ದೋವೆಲ್ ಅವರು ಎಲ್ಲಿ ಹಾಗೂ ಯಾವಾಗ ಎಷ್ಟರಮಟ್ಟಿಗೆ ದಾಳಿ ಮಾಡಬೇಕು ಎನ್ನುವ ಕುರಿತು ನಾಯಕರು ತಿಳಿಸುತ್ತಾರೆ. ನಾವು ಉಗ್ರರು ಹಾಗೂ ಅವರಿಗೆ ಬೆಂಬಲ ನೀಡುವವರ ವಿರುದ್ಧ ಹೋರಾಡಬೇಕಿದೆ ಎಂದು ಹೇಲುವ ಮೂಲಕ ಯೋಧರನ್ನು ಹುರುದುಂಬಿಸಿದರು.

         ಉನ್ನತ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸುವಾಗ ಯಾವ ದಳವನ್ನು ನಿಯೋಜನೆ ಮಾಡಬೇಕು ,ಎಷ್ಟು ಬಟಾಲಿಯನ್ ನಿಯೋಜನೆ ಮಾಡಬೇಕು ಎನ್ನುವ ಮಾತು ಕೇಳಿಸುತ್ತದೆ. ಆಗ ನಾವು ಸಿಆರ್‍ಪಿಎಫ್ ಯೋಧರನ್ನೇ ನಿಯೋಜನೆ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತವೆ. ಏಕೆಂದರೆ ಸಿಆರ್‍ಪಿಎಫ್ ವಿಶ್ವಾಸಾರ್ಹ ದಳವಾಗಿ ನಂಬಿಕೆ ಗಳಿಸಿದೆ ಮತ್ತು ನಾವು ಸಿಆರ್‍ಪಿಎಫ್ ನ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದೇವೆ. ಹಲವು ವರ್ಷಗಳ ಸತತ ಸಾಧನೆಯಿಂದ ಸಿಆರ್‍ಪಿಎಫ್ ಈ ವಿಶ್ವಾಸಾ ಗಳಿಸಿದೆ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.

        ಪುಲ್ವಾಮಾ ದಾಳಿಯನ್ನು ನೆನೆದ ಅಜಿತ್ ದೋವಲ್ ಅವರು, ಫೆಬ್ರವರಿ 14ರಂದು ಉಗ್ರರ ದಾಳಿಗೆ ಹುತಾತ್ಮರಾದ ಸಿಆರ್‍ಪಿಎಫ್‍ನ 40 ಯೋಧರಿಗೆ ಗೌರವ ಸಲ್ಲಿಸಿದ್ದೇನೆ ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link