ಜನಪ್ರತಿನಿದಿಗಳ ಹಿಡಿತದಲ್ಲಿ ಅಧಿಕಾರಿಗಳು : ಹಸಿರು ಸೇನೆ

ತುರುವೇಕೆರೆ:

      ಪಟ್ಟಣದ ಜಿಲ್ಲಾ ಪಂಚಾಯ್ತಿಯಲ್ಲಿ ಜನಪ್ರತಿನಿದಿಗಳ ಹಿಡಿತದಲ್ಲಿ ಅಧಿಕಾರಿಗಳು ನರೇಗಾ ಕಾಮಾಗಾರಿಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್‍ಗೌಡ ಆರೋಪಿಸಿದರು.ಪಟ್ಟಣದ ಜಿಲ್ಲಾ ಪಂಚಾಯ್ತಿ ಕಚೇರಿಗೆ ಮಂಗಳವಾರ ಬೇಟಿ ನೀಡಿ ಎಇಇ ಕೆ.ಆರ್.ನಾರಾಯಣ್ ಶಟ್ಟಿ ಜೊತೆ ನರೇಗ ಯೋಜನೆಯ ಬಗ್ಗೆ ಚರ್ಚೆ ನೆಡೆಸಿ ನಂತರ ಪತ್ರಿಕೆಗಳೊಂದಿಗೆ ಮಾತನಾಡಿ ತಾಲೂಕಿನಲ್ಲಿ ನೆಡೆಯುತ್ತಿರುವ ನರೇಗಾ ಕಾಮಗಾರಿಗಳು ಎಲ್ಲ ಗುತ್ತಿಗೆದಾರರು ಹಾಗೂ ಬಲಾಡ್ಯರ ಪಾಲಾಗುತ್ತಿವೆ.

        ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಕಾಮಗಾರಿ ಉಪಯೋಗವನ್ನು ಪಡೆಯಲು ಸಾದ್ಯವಾಗುತ್ತಿಲ್ಲ. ಗ್ರಾಮೀಣ ಬಾಗದ ಜನರು ಕೂಲಿಗಾಗಿ ಬೇರೆಡೆಗೆ ವಲಸೆ ತೆಡೆಯಲು ನರೇಗಾ ಯೋಜನೆಯನ್ನು ತರಲಾಗಿತ್ತು ಅದು ತಾಲೂಕಿನಲ್ಲಿ ವಿಪಲವಾಗುತ್ತಿದೆ. ಗ್ರಾಮೀಣ ಭಾಗದ ರೈತರು ಗ್ರಾಮದಲ್ಲಿನ ಕಾಮಾಗಾರಿಗಳನ್ನು ಮುಂಜೂರು ಮಾಡಿಸಿ ಕಾಮಗಾರಿ ನಿರ್ವಹಿಸಲು ಅರ್ಜಿ ಸಲ್ಲಿಸಿ ಅಂದಾಜು ಪಟ್ಟಿ ತಯಾರಿಸಿ ಎನ್.ಎಮ್.ಆರ್ ತೆಗೆದು ಕೆಲಸ ಮಾಡುತ್ತಿದ್ದಾರೆ ಆದರೆ ಕೆಲವು ಜನಪ್ರತಿನಿಧಿಗಳು ನಮ್ಮ ಅನುದಾನವೆಂಬಂತೆ ನಾವು ಸೂಚಿಸಿದವರಿಗೆ ಕಾಮಗಾರಿ ನೀಡಬೇಕು ಎಂದು ಇಂಜಿನೀಯರ್‍ಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.

        ನರೇಗಾ ಕಾಮಗಾರಿ ಯಾವೊಬ್ಬ ಜನಪ್ರತಿನಿಧಿಗಳ ಅನುದಾನವಲ್ಲ ಎಲ್ಲರು ಕಾಮಾಗಾರಿಗಳನ್ನು ನಿರ್ವಹಿಸಬಹುದಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಕಛೇರಿಯಲ್ಲಿ ಹಲವಾರ ಬಾರಿ ಮನವಿ ಮಾಡಿದರು ಯಾವುದೇ ಕಾಮಗಾರಿಗಳನ್ನು ರೈತರಿಗೆ, ಕೂಲಿ ಕಾರ್ಮಿಕರಿಗೆ ನೀಡದೆ ತಾರತಮ್ಯ ಮಾಡುತ್ತಿದ್ದಾರೆ. ಜನಪ್ರತಿನಿದಿಗಳ ಒತ್ತಡಕ್ಕೆ ಮಣಿದು ಗುತ್ತಿಗೆದಾರರಿಗೆ ನೀಡಿದ್ದು ಗುತ್ತಿಗೆದಾರರು ಸ್ಥಳಿಯ ಕೂಲಿ ಕಾರ್ಮಿಕರಿಗೆ ನೀಡದೆ ಬೇರೆ ಕಡೆಯಿಂದ ಕೂಲಿ ಕಾರ್ಮಿಕರನ್ನು ಕರೆಸಿ ಹಾಗೂ ಯಂತ್ರಗಳನ್ನು ಉಪಯೋಗಿಸಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು ಕೂಡಲೇ ಸರಿಪಡಿಸಬೇಕು ಇಲ್ಲವಾದರೆ ಜಿಲ್ಲಾ ಪಂಚಾಯ್ತಿ ಸಿ.ಎಸ್.ರವರಿಗೂ ದುರು ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಬದಲ್ಲಿ ಮುಖಂಡ ಅರಳಿಕೆರೆರವಿಕುಮಾರ್ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link