ತಿಪಟೂರು
ಮಾಧ್ಯಮ ಮಿತ್ರರಿಗೆ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಗರದ ತಾ.ಪಂ ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿದ ವಿ.ವಿ.ಪ್ಯಾಟ್ ಯಂತ್ರ ಕುರಿತು ಅರಿವು ಮೂಡಿಸಲಾಯಿತು.ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಮಾತನಾಡಿ ಜಿಲ್ಲೆಯಲ್ಲಿ ಕಡ್ಡಾಯ ಮತದಾನವಾಗಬೇಕು.
ಎಲ್ಲಾ ಭೂತ್ಗಳಲ್ಲೂ ಮತದಾರರಿಗೆ ಮತದಾನದ ಕುರಿತು ಅರಿವು ಮೂಡಿಸಲಾಗುತ್ತಿದೆ. ಹೆಚ್ಚು ಜನಸಂದಣಿ ಇರುವ ಕಡೆ, ರಾಜಕೀಯ ಮುಖಂಡರಿಗೂ ವಿ.ವಿ ಪ್ಯಾಟ್ ಬಳಕೆ ತಿಳಿಸಲಾಗುತ್ತಿದ್ದು, ಅಂಗವಿಕಲರಿಗೆ ವಯೋವೃದ್ಧರಿಗೆ ವಿಶೇಷವಾಗಿ ಮತದಾನಕೇಂದ್ರಕ್ಕೆ ಹೋಗಿಬರಲು ವಾಹನ ವ್ಯವಸ್ಥೆಯನ್ನು ಸ್ವೀಪ್ ಸಮಿತಿಯಿಂದ ಕಲ್ಪಿಸಲಾಗುವದು. ತಾಲ್ಲೂಕಿನಲ್ಲಿ 233 ಮತಗಟ್ಟೆಗಳಿವೆ ಎಂದರು.ತಾಲ್ಲೂಕು ಸ್ವೀಪ್ ಸಮಿತಿ ನಿರ್ವಾಹಕ ಬಸವಲಿಂಗಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
