ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರೆಗೆ ಬಾರೀ ಜನಸಾಗರ

ಚಳ್ಳಕೆರೆ

ಬಯಲು ಸೀಮೆಯ ಪವಾಡ ಪುರುಷನೆಂದೆ ಖ್ಯಾತನಾದ ತನ್ನ ಮಹಿಮೆಯಿಂದಲೇ ಲಕ್ಷಾಂತರ ಭಕ್ತರ ಸಂಕಷ್ಟಗಳಿಗೆ ನೆರವಾಗುವ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಬಿಸಿಲನ್ನು ಲೆಕ್ಕಿಸದೆ ನಾಡಿನ ಮೂಲೆ ಮೂಲೆಗಳಿಂದ ಹರಿದು ಬಂದ ಜನ ಸಾಗರ ಶ್ರೀಸ್ವಾಮಿಯ ರಥೊತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಕ್ತರ ಸಂಖ್ಯೆ ಕಡಿಮೆ ಇತ್ತಾದರೂ. ನಾಯಕನಹಟ್ಟಿ ಗ್ರಾಮದ ರಥೋತ್ಸವ ಸಾಗುವ ಬೀದಿಯಲ್ಲಿ ಬಿಸಿಲನ್ನು ಲೆಕ್ಕಿಸದೆ ಲಕ್ಷಾಂತರ ಜನ ಶ್ರೀ ಸ್ವಾಮಿಯ ಪಲ್ಲಕಿಯಲ್ಲಿ ಆಗಮಿಸಿ ರಥೋತ್ಸವವನ್ನು ಏರಿದ ನಂತರ ಮುಕ್ತಿ ಭಾವುಟ ಹರಾಜು ಪ್ರಕ್ರಿಯೆ ಪ್ರಾರಂಭವಾಗಿತ್ತು. ಹರಾಜಿನಲ್ಲಿ ಉದ್ಯಮಿ ಎಲ್.ಸೋಮಣ್ಣ 51 ಲಕ್ಷಕ್ಕೆ ಬಾವುಟ ಪಡೆದರು. ನಂತರ ನೆರದಿದ್ದ ಭಕ್ತರು ಭಕ್ತಿಯಿಂದ ನಮಿಸಿ ರಥವನ್ನು ಎಳೆದರು.

ಕೂಡಲೇ ಜನರು ತಮ್ಮ ಹರಿಕೆಯಂತೆ ಸೂರುಬೆಲ್ಲ, ಬಾಳೆಹಣ್ಣು, ಮೆಣಸು, ದವನ, ಮಂಡಕ್ಕಿ ರಥದ ಮೇಲೆ ಹಾಕಿ ತಮ್ಮ ಹರಕೆ ತೀರಿಸಿಕೊಂಡರು. ಇದಕ್ಕೂ ಮುನ್ನ ದೇವಸ್ಥಾನ ಮುಂದಿನ ಆವರಣದಲ್ಲಿ ಪಾರಂಪರಿಕ ಪದ್ಧತಿಯಂತೆ ಒಣ ಕೊಬರಿಯನ್ನು ಸುಟ್ಟು ತಮ್ಮ ಹರಕೆಯನ್ನು ತೀರಿಸಿಕೊಂಡರು. ಭಕ್ತರು ದೇವರ ದರ್ಶನ ಪಡೆಯಲು ಅನುಕೂಲವಾಗುತಂತೆ ಸರತಿ ಸಾಲಿನಲ್ಲಿ ಬರುವಂತೆ ವ್ಯವಸ್ಥೆ ಮಾಡÀಲಾಯಿತು. ಸುಮಾರು ಗಂಟೆಗಳ ಕಾಲ ಸರತಿ ಸಾಲಿನಲ್ಲಿಯೇ ಸಾಗಿದ ಭಕ್ತರು ದೇವರ ದರ್ಶನ ಪಡೆದು ಹರಕೆ ತೀರಿಸಿ, ರಥವನ್ನು ಎಳೆದು.

ನಾಯಕನಹಟ್ಟಿ ಗ್ರಾಮದ ಸುತ್ತಮುತ್ತಲ ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಜನತೆ ಚದುರಿ ಹೋಗಿತ್ತು. ಎಲ್ಲಾ ತೋಟಗಳು ಸಹ ಭಕ್ತರಿಂದ ಆಕ್ರಮಿಸಿಕೊಂಡಿದ್ದು ಕಂಡು ಬಂತು. ದೇವಸ್ಥಾನದ ಆವರಣವೂ ಸೇರಿದಂತೆ ಎಲ್ಲಿ ನೋಡಿದರು ಭಕ್ತರ zಂಡೆ ಎದ್ದು ಕಾಣುತ್ತಿತ್ತು. ಈಬಾರಿಯ ಜಾತ್ರೆಂiÀiಲ್ಲಿ ಅತಿ ವಿಳವಾಗಿ ಕಂಡ ಎತ್ತಿನ ಗಾಡಿಗಳು. ಆಧುನಿಕತೆ ಹೊಂದಿಕೊಂಡಂತೆ ಜನರು ಟಾಟಾ ಎಸಿ, ಕಾರು, ಟೆಂಪೋ, ದ್ವಿಚಕ್ರ ವಾಹನಗಳಲ್ಲಿ ಬಂದಿದ್ದು ಕಂಡು ಬಂದ ದೃಶ್ಯಗಳು. ಜಿಲ್ಲಾ ಪೊಲೀಸ್ ಇಲಾಖೆ ಪ್ರಾಣಿ ಬಲಿಯನ್ನು ನಿಷೇದಿಸಿದ್ದರೂ ಸಹ ಪೊಲೀಸ್ ಇಲಾಖೆ ಅರಿವಿಗೆ ಬಾರದಂತೆ ಪ್ರಾಣಿಗಳನ್ನು ಬಲಿಕೊಡಲು ಸಿದ್ದತೆಯನ್ನು ನಡೆಸಿದ್ದರು.

ಮುಕ್ತಿ ಭಾವುಟ ಹರಾಜು;- ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಸ್ವಾಮಿಯ ರಥೋತ್ಸವಕ್ಕೂ ಮುನ್ನ ಮುಕ್ತಿ ಭಾವುಟವನ್ನು ಹಾರಾಜು ಮಾಡಲಾಗುತ್ತದೆ. ಈ ಬಾರಿ ಹರಾಜಿನಲ್ಲಿ ಭಾಗವಹಿಸಿದ್ದ ಹಿರಿಯೂರು ಶಾಸಕ ಡಿ.ಸುಧಾಕರ್‍ಗೂ ಮತ್ತು ಬೆಂಗಳೂರಿನ ಉದ್ಯಮಿ ಸೋಮಣ್ಣಗೆ ತ್ರಿರ್ವತರವಾದ ಪೈಪೋಟಿ ಏರ್ಪಟ್ಟು ಕೊನೆಗೆ 51 ಲಕ್ಷಕ್ಕೆ ಸೋಮಣ್ಣ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link