ಹುಳಿಯಾರು
ಪಟ್ಟಣಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ಅವ್ಯಾಹತವಾಗಿ ಮಣ್ಣು ಮತ್ತು ಮರಳು ಲೂಟಿ ನಡೆಯುತ್ತಿದ್ದು, ಕಡಿವಾಣ ಹಾಕುವಂತೆ ಉಪತಹಶೀಲ್ದಾರ್‍ಗೆ ರೈತ ಸಂಘ ಮತ್ತು ಕೇಶವಾಪುರ ಗ್ರಾಮಸ್ಥರು ಮನವಿ ಸಲ್ಲಿಸಿದರು.ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಮತ್ತು ಮರಳನ್ನು ಇಟ್ಟಿಗೆ ಕಾರ್ಖಾನೆಯವರು ದೋಚುತ್ತಿದ್ದಾರೆ. ಈಗಾಗಲೇ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ಗಮನಕ್ಕೆ ತರಲಾಗಿದೆ. ಅಲ್ಲದೆ ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಸಣ್ಣ ನೀರಾವರಿ ಸೇರಿದಂತೆ ಯಾವ ಇಲಾಖೆಯವರು ಇತ್ತ ಗಮನ ಹರಿಸುತ್ತಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಪ್ಪ ದೂರಿದರು. ಕೂಡಲೇ ಉಪತಹಶೀಲ್ದಾರ್ ಅವರು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಚಂದ್ರಪ್ಪ, ಕರಿಯಪ್ಪ ತಿಮ್ಮಯ್ಯ ಹಾಗೂ ಕೇಶವಾಪುರ ಗ್ರಾಮಸ್ಥರಾದ ನರಸಪ್ಪ, ದುರ್ಗರಾಜ, ಕೆರೆ ಕಾವಲು ಸಮಿತಿಯ ಲಿಂಗರಾಜು, ಆಫೀಜ, ಜಲಾಲ್ ನಾಗೇಂದ್ರಪ್ಪ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
