ಹುಳಿಯಾರು:
ಸಾರ್ವಜನಿಕ ಕೊಳವೆಬಾವಿಯ ನೀರನ್ನು ಗ್ರಾಪಂ ಅಧ್ಯಕ್ಷರೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರೇ ತರಾಟೆಗೆ ತೆಗೆದುಕೊಂಡ ಘಟನೆ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಜರುಗಿದೆ.
ಹುಳಿಯಾರು ಹೋಬಳಿಯ ಯಳನಾಡು ಗ್ರಾಪಂ ಅಧ್ಯಕ್ಷ ಕಾಟಲಿಂಗಯ್ಯ ಅವರೇ ಈ ಆರೋಪಕ್ಕೆ ತುತ್ತಾತ ಗ್ರಾಪಂ ಅಧ್ಯಕ್ಷರಾಗಿದ್ದಾರೆ. ಇವರು ಕಳೆದ 15 ದಿನಗಳಿಂದ ನೀರು ಶುದ್ಧಿ ಕರಣ ಘಟಕ್ಕಕೆ ನೀರು ಸರಬರಾಜು ಮಾಡುವ ನೆಪದಲ್ಲಿ ಸಾರ್ವಜನಿಕ ಕೊಳವೆಬಾವಿಯಿಂದ ತಮ್ಮ ಟ್ಯಾಂಕರ್‍ನಲ್ಲಿ ನೀರು ತುಂಬಿಕೊಂಡು ರೈತರ ತೋಟಗಳಿಗೆ ಹಣಕ್ಕೆ ನೀರು ಮಾರಾಟ ಮಾಡುತ್ತಿದ್ದಾರೆ ಎಂಬುದು ಕೆಲ ಗ್ರಾಮಸ್ಥರ ಆರೋಪವಾಗಿದೆ.
ಅಲ್ಲದೆ ಮತ್ತೊಂದು ಕೊಳವೆ ಬಾವಿಯಿಂದ ಓವರ್ ಹೆಡ್ ಟ್ಯಾಂಕ್‍ಗೆ ನೀರು ಸರಬರಾಜು ಮಾಡುವ ರೈಸಿಂಗ್ ಲೈನ್ ಪೈಪ್ ಮೂಲಕ ತಮ್ಮ ಬೆಂಬಲಿಗರಿಗೆ ಕೊಳಾಯಿಗಳನ್ನು ಹಾಕಿ ನೀರು ಕೊಟ್ಟಿದ್ದಾರೆ. ಇದರಿಂದ ಓವರ್ ಹೆಡ್ ಟ್ಯಾಂಕ್‍ಗೆ ಸಮರ್ಪಕವಾಗಿ ನೀರು ಸರಬರಾಜು ಆಗದೆ ಗ್ರಾಮದಲ್ಲಿ ಕೃತಕ ನೀರಿನ ಹಾಹಾಕಾರ ಸೃಷ್ಠಿಯಾಗಿದೆ ಎಂದು ದೂರಿದ್ದಾರೆ.
ಈ ಸಂಬಂಧ ತಹಶೀಲ್ದಾರ್, ತಾಪಂ ಇಓ, ಪಿಡಿಓ ಅವರಿಗೆ ದೂರು ನೀಡಿದರೂ ದಾಖಲೆ ಕೇಳಿದ್ದರು. ಹಾಗಾಗಿ ಅಕ್ರಮವಾಗಿ ತೋಟಕ್ಕೆ ನೀರು ಹೊಡೆಯುತ್ತಿದ್ದ ಸಂದರ್ಭದಲ್ಲಿ ವಿಡಿಯೋಗಳನ್ನು ಮಾಡಿ ವಾಟ್ಸಪ್ ಮೂಲಕ ಕಳುಹಿಸಿದ ಪರಿಣಾಮ ಗ್ರಾಮ ಲೆಕ್ಕಿಗ ಶ್ರೀನಿವಾಸ್, ಪಿಡಿಓ ಮಲ್ಲೇಶಚಾರ್ ಹಾಗೂ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿ ನಿರ್ಗಮಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
