ಹರಪನಹಳ್ಳಿ
ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಂಹತೇಶ್ ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ವೈದ್ಯರ ಘಟಕದ ಜನ ಸಂರ್ಪಕ ಕಛೇರಿಯಲ್ಲಿ ಶುಕ್ರವಾರ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಿವಳ್ಳಿ ಅವರ ಕಾರ್ಯಕ್ಷಮತೆಯನ್ನು ಗುರುತಿಸಿದ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡಿ ಗೌರವಿಸಿತ್ತು.
ಸಚಿವ ಅಥವಾ ಶಾಸಕರೆಂಬ ಹಮ್ಮು ಬಿಮ್ಮುಗಳಿಲ್ಲದೇ ಸಾಮಾನ್ಯ ಜನರೊಂದಿಗೆ ಹೆಚ್ಚು ಒಡನಾಟವನ್ನು ಬೆಳಸಿಕೊಂಡಿದ್ದರು. ಧಾರವಾಡದಲ್ಲಿ ನಡೆದ ಕಟ್ಟಡ ದುರಂತದಲ್ಲಿ ಸಿಲುಕಿಕೊಂಡವರ ರಕ್ಷಣೆಯಲ್ಲಿ ಮಹತ್ವ ಪಾತ್ರವಹಿಸಿದ್ದರು. ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆ ಗಮನ ಹರಿಸಲು ಬಿಡುವಿಲ್ಲದೇ ಸಾರ್ವಜನಿಕರ ಕುಂದು ಕೊರತೆಯ ಪರಿಹಾರ ನೀಡುತ್ತಿದ್ದರು. ಕುಟುಂಬ ಸದಸ್ಯರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ದುಖ: ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದರು.
ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪಿ.ಶಿವಕುಮಾರ ನಾಯ್ಕ್, ಎನ್‍ಎಸ್‍ಯುಐ ಅಧ್ಯಕ್ಷ ಎಂ.ಡಿ.ಶ್ರೀಕಾಂತ, ಪುರಸಭೆ ಮಾಜಿ ಸದಸ್ಯ ಜಾವೂರ್, ಮುಖಂಡರಾದ ಸಿದ್ದನಗೌಡ ವಕೀಲರು, ಗೌರಮ್ಮ, ಭಾಷ್, ಖಾಜಪೀರ್, ಮಹಾಂತೇಶನಾಯ್ಕ್, ಕೆ.ವಿ.ಕಾಂತರಾಜ, ದಾದ ಖಲಂದರ್, ಪ್ರಕಾಶ ನಾಯ್ಕ್, ಅಣ್ಣಪ್ಪ, ಗಣೇಶ್, ರಾಜನಾಯ್ಕ್, ಶಿವುಕಮಾರ ಗೌರಿಹಳ್ಳಿ, ಮಂಜುನಾಥ, ಮನೋಜ್, ಪ್ರಜ್ವಲ್ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
