ಸಿದ್ಧಾರ್ಥ ಕಾಲೇಜಿನಲ್ಲಿ ರೇಷ್ಮೆ ಕೃಷಿ ಕಾರ್ಯಾಗಾರ

ತುಮಕೂರು

        ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಸೆಮಿನಾರ್‍ಹಾಲಿನಲ್ಲಿ ರೇಷ್ಮೆ ಕೃಷಿ ವಿಭಾಗದ ವತಿಯಿಂದ ರೇಷ್ಮೆ ಕೃಷಿ ವ್ಯವಸಾಯದ ಬಗ್ಗೆ ಮತ್ತು ಬೈವೊಟ್ಯನ್ ರೇಷ್ಮೆ ಕೃಷಿ ವಿಸ್ತರಣೆ ಬಗ್ಗೆ ವಿಚಾರಣ ಸಂಕಿರಣವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ ವಿಜ್ಞಾನಿ ಹನುಮಂತರಾಯಪ್ಪ, ವಿದ್ಯಾರ್ಥಿಗಳಿಗೆ ಹಿಪ್ಪಿನೇರಳೆ ಬೆಳೆಯ ಬೇಸಾಯದ ಬಗ್ಗೆ ಮತ್ತು ಸುಧಾರಿತ ಹಿಪ್ಪಿನೇರಳೆ ಬೆಳೆಯನ್ನು ಹೇಗೆ ಬೆಳೆಯಬೇಕು ಮತ್ತು ಅದಕ್ಕೆ ಬರುವ ರೋಗಗಳ ಬಗ್ಗೆ ಮಾಹಿತಿ ನೀಡಿದರು. ರೋಗ ನಿವಾರಣಾ ಕ್ರಮಗಳನ್ನು ಸೂಕ್ಷ್ಮವಾಗಿ ವಿದ್ಯಾರ್ಥಿಗಳಿಗೆ ಪಿ.ಪಿ.ಟಿ ಮೂಲಕ ತಿಳಿಸಿದರು.

         ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ವೈ.ಕೆ ಬಾಲಕೃಷ್ಣ ಮಾತನಾಡಿ, ಬೈವೊಟ್ಯನ್ ರೇಷ್ಮೆ ಸಾಕಾಣಿಕೆ ಮತ್ತು ಅದು ತುಮಕೂರು ಜಿಲ್ಲೆಯ ಯಾವ ಯಾವ ಭಾಗಗಳಲ್ಲಿ ವಿಸ್ತರಿಸಲಾಗಿದೆ ಮತ್ತು ಅದು ಜನರಿಗೆ ಪರೋಕ್ಷವಾಗಿ ಮತ್ತು ಪ್ರತ್ಯೇಕ್ಷವಾಗಿ ಎಷ್ಟು ಜನರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸಿದೆ, ಅಧಿಕ ಇಳುವರಿ ಹೇಗೆ ಪಡೆಯಬಹುದು, ತಾಂತ್ರಿಕ ಸಲಹೆಗಳನ್ನು ವಿದ್ಯಾರ್ಥಿಗಳಿಗೆ ಪಿ,ಪಿ.ಟಿ ಮೂಲಕ ತಿಳಿಸಿದರು.

       ರೇಷ್ಮೆ ಕೃಷಿ ವಿಭಾಗದ ಮುಖ್ಯಸ್ಥರಾದ ಡಾ.ಹೇಮಲತಾ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ವೈ.ಎಂ ರೆಡ್ಡಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ|| ಹೆಚ್.ಎನ್ ವಿಜಯೇಂದ್ರ, ರೇಷ್ಮೆ ಕೃಷಿ ವಿಭಾಗದ ಮುಖ್ಯಸ್ಥರಾದ ಡಾ.ಹೇಮಲತಾ, ಜಿ.ಹನುಮಂತರಾಯಪ್ಪ ಭಾಗವಹಿಸಿದ್ದರು. ನಿವೃತ್ತರಾಗಲಿರುವ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ|| ಬಿ. ಮಂಜೇಗೌಡ ಅವರನ್ನು ಸನ್ಮಾನಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link