ತುಮಕೂರು
ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಮೇಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ಮೊಮೆಂಟಂ 2019 ರಾಷ್ಟ್ರಮಟ್ಟದ ವಿದ್ಯಾರ್ಥಿಗಳ ತಾಂತ್ರಿಕ ಕಾರ್ಯಾಗಾರವನ್ನು ಬೆಂಗಳೂರು ಸಿಎಮ್ಟಿಐ ನಿರ್ದೇಶಕ ಡಾ.ನಾಗಹನುಮಯ್ಯನವರು ಉದ್ಘಾಟಿಸಿದರು.
ಮ್ಯೆಕ್ರೊ ಮತ್ತು ನ್ಯಾನೊ ತಂತ್ರಜ್ನಾನ, ಸ್ಮಾರ್ಟ ಇಂಡಸ್ಟ್ರೀಸ್, ಸ್ಮಾರ್ಟ ಫೌಂಡರಿ, ಐ.ಓ.ಟಿ. ಆಧಾರಿತ ಅಧುನಿಕ ಕ್ಯಗಾರಿಕೆಗಳ ಬಗ್ಗೆ ವಿವರಣೆಯನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿದರು. ವಿದ್ಯಾರ್ಥಿ ಜೀವನದ ಮಹತ್ವದ ಬಗ್ಗೆ ಮಾತನಾಡಿ, ಕನಸುಗಳು ದೊಡ್ಡದಿರಲಿ ಮತ್ತು ತಳಮಟ್ಟದ ವಾಸ್ತವದ ಅರಿವು ಜೊತೆಯಲ್ಲಿ ಉನ್ನತ ಸ್ಥಾನ ಮತ್ತು ಸಾಧನೆಗಳ ಬಗ್ಗೆ ಯೊಚಿಸುವಂತೆ ಸಲಹೆ ನೀಡಿದರು.
ಕಾಲೇಜಿನ ನಿರ್ದೇಶಕರಾದ ಡಾ.ಎಂ.ಎನ್.ಚನ್ನಬಸಪ್ಪನವರು ಮಾತನಾಡಿ, ಗುಣಮಟ್ಟದ ಮತ್ತು ಪ್ರಯೋಗಿಕ ಬೊಧನೆ ಬಗ್ಗೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಿದರು.
ಮುಖ್ಯ ಅಥಿತಿಗಳಾಗಿ ಸಿಇಓ ಡಾ.ಶಿವಕುಮಾರಯ್ಯ ಹಾಗು ಪ್ರಾಂಶುಪಾಲರಾದ ಡಾ.ಕೆ.ಪಿ.ಶಿವಾನಂದ, ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಸ್.ಶಶಿಶೇಖರ, ಡಾ.ಎಂ.ಶಿವಶಂಕರ್ ಹಾಗು ಖಜಾಂಚಿ ಡಾ.ನಾಗರಾಜು ವಿದ್ಯಾರ್ಥಿ ಸಂಯೋಜಕ ಉಲ್ಲಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ವಿವಿಧ ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.