ಮತ ನಮ್ಮ ಹಕ್ಕು ತಪ್ಪದೆ ಚಲಾಯಿಸಿ :ಕೆ.ಎಂ ಕರಿಬಸಯ್ಯ

ಹೊನ್ನಾಳಿ

       ಇಂದಿನ ಜೀವನವು ಒತ್ತಡದಿಂದ ನಡೆಯುತ್ತಿದೆ. ಅ ನಡುವೆಯು ನಾವು ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ಪಾಲಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ನಾವು ತಪ್ಪದೆ ಪಾಲಿಸಬೇಕು ಎಂದು ಹೊನ್ನಾಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ ಕರಿಬಸಯ್ಯ ಅಭಿಪ್ರಾಯಪಟ್ಟರು.

       ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ನೌಕರರ ಸಂಘ, ಅನುದಾನಿತ ಪ್ರಾಥಮಿಕ ಶಾಲ ಶಿಕ್ಷಕರ ಸಂಘದ ಸಹಯೋಗದೊಂದಿಗೆ ನಡದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

        ಜನರು ಅಲಸ್ಯವನ್ನು ತೋರುತ್ತಿದ್ದಾರೆ. ನಾವು ನಮ್ಮ ಕರ್ತವ್ಯವನ್ನು ಮರೆದರೆ ಕಷ್ಟ. ಮತದಾನ ನಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜ್ಞಾವಂತ ಸಮಾಜವನ್ನು ನಿರ್ಮಾಣ ಮಾಡಬೇಕಾದ ಹೊಣೆಗಾರಿಕೆಯು ನಮ್ಮ ಮೇಲಿದೆ. ನಾವುಗಳು ನಮ್ಮ ದೇಶವನ್ನು ಕಟ್ಟಿಕೊಳ್ಳಬೇಕಾದರೆ ಅರ್ಹರಿಗೆ ಮತವನ್ನು ಹಾಕಬೇಕು. ಈ ಮೂಲಕ ದೇಶದ ಸಮಗ್ರತೆಗೆ ಆಧ್ಯತೆಯನ್ನು ನೀಡಬೇಕು ಎಂದರು.

        ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಗಿರೀಶ್ ಎಂ ನಾಡಿಗ್ ಮಾತನಾಡಿ, ಇಂದು ನೋಟಿಗಾಗಿ ಓಟು, ಓಟಿಗಾಗಿ ನೋಟು ಎಂಬ ಪರಿಕಲ್ಪನೆಯು ಜನರಲ್ಲಿ ಮೂಡುತ್ತಿದೆ. ಇದರಿಂದ ಭ್ರಷ್ಟಾಚಾರವು ಹೆಚ್ಚಾಗುತ್ತಿದೆ. ಪ್ರಜ್ಞಾವಂತರೆನಿಸಿಕೊಂಡ ನಾವು ರಜಾ ಮಜಾ ಎಂಬ ಧೋರಣೆಯನ್ನು ಬಿಡಬೇಕು. ನಾವೆಲ್ಲರೂ ಮತವನ್ನು ಹಾಕಬೇಕು. ಮತದೊಂದಿಗೆ ಸುಭದ್ರ ಸರ್ಕಾರವನ್ನು ರಚಿಸುವ ಹೊಣೆಗಾರಿಕೆಯಲ್ಲಿ ನಮ್ಮ ಪಾತ್ರ ದೊಡ್ಡದಿದೆ ಎಂದರು.

        ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಿವಬಸಪ್ಪ ಹೆಚ್ ಯತ್ತಿನಹಳ್ಳಿ ಮಾತನಾಡಿ, ಯಾರ್ಯರು ಮತಪಟ್ಟಿಯಲ್ಲಿ ಹೆಸರು ಸೇರಿಸಿಲ್ಲವೋ ಅವರು ತಕ್ಷಣ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾನದ ನಂತರ ಕಾಲೇಜಿಗೆ ಬರುವಾಗ ನೀವು ಮತ ಹಾಕಿರುವುದನ್ನು ಕಡ್ಡಾಯವಾಗಿ ಸಾಬೀತು ಪಡಿಸಬೇಕು ಮತ ಶಾಯಿಯನ್ನು ಬೆರಳಿನಲ್ಲಿ ತೋರಿಸುವ ಮೂಲಕ. ನೀವು ಮತ ಹಾಕಿ ನಿಮ್ಮವರು ಮತ ಹಾಕುವಂತೆ ನೋಡಿಕೊಳ್ಳಬೇಕು ಎಂದರು.

        ಆಂಗ್ಲ ಉಪನ್ಯಾಸಕ ಡಿ.ಸಿ ಪಾಟೀಲ್ ಮಾತನಾಡಿ, ನಿಮಗೆ ನಿಂತಿರುವ ಅಭ್ಯರ್ಥಿಗಳಲ್ಲಿ ಮತ ಹಾಕಲು ಅರ್ಹರು ಅಲ್ಲ ಎಂದು ತೋರಿದರೆ ಮೇಲಿನ ಯಾರೂ ಅಲ್ಲ (ನೋಟಾ) ಕ್ಕೆ ಮತವನ್ನು ಹಾಕಬಹುದಾಗಿದೆ. ಹಾಗೂ ನೋಟದ ಮಹತ್ವದ ಬಗ್ಗೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸವಿಸ್ತಾರವಾಗಿ ವಿವರಿಸಿದರು.ಉಪನ್ಯಾಸಕರಾದ ಪುಷ್ಪಲತಾ ಕೆ, ಡ್ರೀಮ್ ಹೊನ್ನಾಳಿಯ ಮನು ಡಿ.ಆರ್, ಮಾತನಾಡಿದರು.
ಸಭೆಯಲ್ಲಿ ಉಪನ್ಯಾಸಕರಾದ ಲೋಕೇಶ್, ಕೊಟ್ರೇಶ್, ಎಂ.ಡಿ ರಾಘವೇಂದ್ರ, ಗ್ರಂಥಾಧಿಕಾರಿ ನಾಗರಾಜ್ ನಾಯ್ಕ್ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link