ಇಷ್ಟಪಟ್ಟು ಓದಿದರೆ ಗುರಿ ತಲುಪಲು ಸುಲಭ

ದಾವಣಗೆರೆ:

      ಜೀವನದಲ್ಲಿ ಶಿಸ್ತು ರೂಢಿಸಿಕೊಂಡು, ಕಷ್ಟಪಟ್ಟು ಓದುವ ಬದಲು, ಶ್ರದ್ಧೆಯಿಂದ ಇಷ್ಟಪಟ್ಟು ಓದಿದರೆ, ಗುರಿ ತಲುಪಲು ಸುಲಭವಾಗಲಿದೆ ಎಂದು ಉದ್ಯಮಿ ಅಣಬೇರು ರಾಜಣ್ಣ ಅಭಿಪ್ರಾಯಪಟ್ಟರು.ನಗರದ ಎಆರ್‍ಜಿ ಕಾಲೇಜಿನಲ್ಲಿಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮನಾತನಾಡಿದ ಅವರು, ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡು ಶ್ರದ್ಧೆಯಿಂದ ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಿದಾಗ ಮಾತ್ರ ತಮ್ಮ ಗುರಿಯನ್ನು ತಲುಪಲು ಸಾಧ್ಯ ಎಂದರು.

      ಪದವಿ ಪೂರೈಸಿದ ನಂತರ ಹೊಟೇಲ್ ಉದ್ಯಮಕ್ಕೆ ಬೇಕಾಗುವ ಹೊಟೇಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗಳನ್ನು ಮಾಡುವುದರ ಮೂಲಕ ತಮ್ಮ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದ ಅವರು, ವಿದ್ಯಾರ್ಥಿಗಳು ಹೆಚ್ಚು ಬುದ್ಧಿವಂತ ವಿದ್ಯಾರ್ಥಿಗಳ ಸಹವಾಸ ಮಾಡಿ ಹೆಚ್ಚು ಅಂಕಗಳನ್ನು ಗಳಿಸಿ, ತಮ್ಮ ತಂದೆ-ತಾಯಿಗಳಿಗೆ ಹಾಗೂ ಕಾಲೇಜಿಗೆ ಕೀರ್ತಿ ತರಬೇಕೆಂದು ಹೇಳಿದರು.

      ತಂದೆ, ತಾಯಂದಿರು ಕಷ್ಟಪಟ್ಟು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಅವರ ಆಶಯಗಳನ್ನು ಈಡೇರಿಸಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಸಾಧನೆ ಮಾಡುವದರ ಬಗ್ಗೆ ಚಿಂತನೆ ಮಾಡಬೇಕು.

     ಷಕರಿಗೆ, ಗುರುಗಳಿಗೆ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಯ ಕಳೆದು ಹೋದಮೇಲೆ ಮತ್ತೆ ಬಾರದು. ಯಾರೂ ಸಹ ಕಾಲಾಹರಣ ಮಾಡಬಾರದು. ವಿದ್ಯಾರ್ಥಿಗಳು ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್, ಹಿಂದಿ ಭಾಷೆಗಳನ್ನು ಓದಬೇಕೆಂದು ಸಲಹೆ ನೀಡಿದರು.

      ಹರಿಹರದ ಡಿಆರ್‍ಎಂ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಜೆ.ಬಿ.ಚಂದ್ರಶೇಖರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದೆ. ಇದರ ಜೊತೆಗೆ ಮಾನವೀಯ ಸಂಬಂಧಗಳು ಸಹ ನಶಿಸಿ ಹೋಗುತ್ತಿವೆ. ವಸ್ತುಗಳ ಮೇಲಿರುವ ನಂಬಿಕೆ ಪೋಷಕರ ಮೇಲೆ ಇಲ್ಲದ್ದಂತಹ ಕಲುಷಿತವಾತಾವರಣ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

       ನಾವು ನಮ್ಮನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಹಿಂದೆ ಶರಣರು ಅಂತರಂಗ ಮತ್ತು ಬಹಿರಂಗ ಎರಡು ಶುದ್ದಿ ಮಾಡಿಕೊಂಡಿದ್ದರು. ಆದರೆ ನಾವು ಇಂದು ಬಹಿರಂಗ ಶುದ್ದಿ ಮಾಡಿಕೊಂಡಿದ್ದೇವೆ. ಅಂತರಂಗವನ್ನು ಶುದ್ದಿಗೊಳಿಸಿಕೊಳ್ಳಲಾಗುತ್ತಿಲ್ಲ, ನಡೆ, ನುಡಿ ಎರಡು ಒಂದೇ ಆಗಿರಬೇಕು. ವಿದ್ಯಾರ್ಥಿಗಳು ಒಳ್ಳೆಯ ಸಜ್ಜನರ ಸಂಘವನ್ನು ಬೆಳೆಸಿಕೊಳ್ಳಬೇಕು. ಹಿಂದೆ ಮಹನೀಯರು ಸಕಲ ಜೀವರಾಶಿಗಳನ್ನು ಪ್ರೀತಿಸುತ್ತಿದ್ದರು. ಹಾಗಾಗಿ ಮಾನವೀಯ ಸಂಸ್ಕೃತಿ, ಸಂಸ್ಕಾರ ಇತ್ತು. ತಂತ್ರಜ್ಞಾನ ಮುಂದುವರೆದಂತೆಲ್ಲಾ ಮೋಸ, ವಂಚನೆ, ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾಧನೀಯ. ವಿದ್ಯಾವಂತರು ಆದೆಂತಲ್ಲಾ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿದೆ. ಶರಣರ ವಚನಗಳು, ಅನುಭವಗಳನ್ನು ಪಾಲಿಸಬೇಕು ಎಂದರು.

      ಕಾರ್ಯಕ್ರಮದಲ್ಲಿ ಎ.ಆರ್.ಜಿ. ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್. ಬಸವರಾಜಪ್ಪ, ಪ್ರೊ ಮಲ್ಲಿಕಾರ್ಜುನ ಆರ್ ಹಲಸಂಗಿ, ಡಾ.ಮಲ್ಲಿಕಾರ್ಜುನ್, ವಾಮದೇವಪ್ಪ, ಮಾಗನೂರು ಚಂದ್ರಶೇಖರಗೌಡ, ಸಾಲಿಗ್ರಾಮ ಗಣೇಶ್ ಶೆಣೈ, ಎಸ್.ಎಂ.ಮಲ್ಲಮ್ಮ, ಬಿ.ಎಂ. ಮುರುಗಯ್ಯ, ಕೆ. ರಾಘವೇಂದ್ರ ನಾಯರಿ, ಎಂ.ಷಡಾಕ್ಷರಪ್ಪ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link