ಓಟನ್ನು ವಿಮೋಚನೆಯ ಅಸ್ತ್ರವಾಗಿ ಬಳಸಿ- ಎ.ನರಸಿಂಹಮೂರ್ತಿ

ತುಮಕೂರು

      ಸಂವಿಧಾನವು ನಮಗೆ ನೀಡಿರುವ ಮತದಾನದ ಹಕ್ಕುನ್ನು ದೌರ್ಜನ್ಯ, ಶೋಷಣೆ, ದಬ್ಬಾಳಿಕೆಯಿಂದ ಹೊರಬರುವ ಅಸ್ತ್ರವಾಗಿ ಬಳಸಬೇಕು, ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ನೀಡಲಾಗಿದ್ದು, ಮಾನವ ಘನತೆ ಜೀವನ ನಡೆಸಲು ಅವಕಾಶ ನೀಡಲಾಗಿದೆ ಎಂದು ಎ.ನರಸಿಂಹಮೂರ್ತಿರವರು ತಿಳಿಸಿದರು.

       ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿವತಿಯಿಂದ ದಿನಾಂಕ-24-03-2019ರಂದು ನಗರ ವಂಚಿತ ಸಂಪನ್ಮೂಲ ಕೇಂದ್ರದಲ್ಲಿ ವಂಚಿತ ಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಿದ್ದ ವಂಚಿತ ಸಮುದಾಯಗಳು ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಉಳಿವಿಗಾಗಿ ನಮ್ಮ ಮತ ಎಂಬ ವಿಷಯದ ಬಗ್ಗೆ ಆಯೋಜಿಸಿದ್ದ ಅಧ್ಯಯನ ಶಿಬಿರವನ್ನು ಸ್ಲಂ ಜನಾಂದೋಲನಾ-ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿರವರು ಕುರಿತು ಮಾತನಾಡಿ ಹಿಂದೆ ಭಾರತ ದೇಶ ರಾಜ ಮನೆತನಗಳ ಸಂಸ್ಥಾನಗಳು ಒಕ್ಕೂಟ ವ್ಯವಸ್ಥೆ ರೂಪುಗೊಂಡ ಹಿನ್ನಲೆ ಮತ್ತು ಸಂವಿಧಾನ ರಚನಾ ಸಭೆಯ ಚರ್ಚೆಗಳ ಬಗ್ಗೆ ತಿಳಿಸಿ ಸಂವಿಧಾನದಿಂದ ಮಾತ್ರ ವಂಚಿತ ಶೋಷಿತರ ರಕ್ಷಣೆ ಸಾಧ್ಯ. ಆದರೆ ಇತ್ತೀಚಿಗೆ ಸಂವಿಧಾನವನ್ನು ನಾಶಗೊಳಿಸುವ ಕಾರ್ಯಗಳು ನಡೆಯುತ್ತೀವೆ. ಆದ್ದರಿಂದ ನಾವು ಸಂವಿಧಾನ ಉಳಿಸಿ ಗೌರವಿಸುವರಿಗೆ ನಮ್ಮ ಮತ ನೀಡಬೇಕು . ಮತದಾನವು ಬದಲಾವಣೆಯ ಅಸ್ತ್ರವಾಗಿ ಬಳಸುವುದರ ಮುಖಾಂತರ ನಮ್ಮ ವಿಮೋಚನೆಗಾಗಿ ಬಳಸಬೇಕೆಂದು ಕರೆ ನೀಡಿದರು.

       ಈ ಅಧ್ಯಯನ ಶಿಬಿರದಲ್ಲಿ ಕೊಳಗೇರಿ ಸಮಿತಿ ಉಪಾಧ್ಯಕ್ಷರಾದ ದೀಪಿಕಾ,ಕಾರ್ಯದರ್ಶಿಯಾದ ಶೆಟ್ಟಾಳಯ್ಯ, ಮತ್ತು ಮಾರಿಯಮ್ಮ ನಗರದ ಅಟೇಕರ್, ಕಣ್ಣನ್,ಮುರು,ಕೃಷ್ಣ, ರಾಜು, ಕಾಶಿರಾಜು, ಹೆಳ್ಳಾರ ಬಂಡೆಯ ಜಬೀರ್, ದಿಬ್ಬೂರಿನ ಸಿದ್ದಪ್ಪ, ಶಂಕರಪ್ಪ, ಜೈಪಾಲ್, ಎಸ.ಎನ್.ಪಾಳ್ಯದ ಗುಲ್ನಾಜ್, ಕೆ.ಆರ್.ರಂಗನಾಥ, ಸಂಪದಾನೆ ಮಠದ ಗಂಗಮ್ಮ ಮತ್ತು ಭಾರತೀ ನಗರದ ಶಾರದಮ್ಮ ಮತ್ತು ಶಾಂತಿ ಹೋಟೆಲ್, ಹಾಗೂ ಅನೇಕ ಶಾಖೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link