ಜನ ಬಿಜೆಪಿ ಪರ ಇದ್ದಾರೆ : ಬಿಎಸ್‍ವೈ ವಿಶ್ವಾಸ

ತುಮಕೂರು

      ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ಹಂಬಲ ಮತದಾರರಲ್ಲಿದೆ. ಪ್ರಧಾನಿಯನ್ನಾಗಿ ಮತ್ತೆ ನರೇಂದ್ರ ಮೋದಿಯವರನ್ನು ಮಾಡಲು ಬಿಜೆಪಿಗೆ ಮತಹಾಕಬೇಕು. ಇಲ್ಲಿನ ಮತದಾರರು ಸಹ ಬಿಜೆಪಿ ಪರ ಇದ್ದಾರೆ. ಹೀಗಾಗಿ ತುಮಕೂರು ಕ್ಷೇತ್ರದಲ್ಲಿ ಜಿ.ಎಸ್.ಬಸವರಾಜು ಆಯ್ಕೆಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

       ತುಮಕೂರಿನ ಕೆಲವು ಮುಖಂಡರುಗಳ ಮನೆಗೆ ಭೇಟಿ ನೀಡಿದ ನಂತರ ಸಿದ್ದಗಂಗಾ ಕ್ಷೇತ್ರಕ್ಕೆ ತೆರಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಬಿಜೆಪಿ ಪರ ಮತದಾರರು ನಿಲುವು ಹೊಂದಿದ್ದಾರೆ. ಎಲ್ಲಾ ಕಡೆಯೂ ನರೇಂದ್ರ ಮೋದಿ ಅಲೆಯಿದೆ. ಜನ ಬಿಜೆಪಿ ಪರ ಇದ್ದಾರೆ. ಹೀಗಾಗಿ ಕರ್ನಾಟಕದ 22 ಕ್ಷೇತ್ರಗಳಲ್ಲಿ ಗೆಲ್ಲುವ ಆಶಾಭಾವನೆ ಹೊಂದಿದ್ದೇವೆ. ಅದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

        ಸಮ್ಮಿಶ್ರ ಸರ್ಕಾರದ ಈ ಆಡಳಿತ ಹಗಲು ದರೋಡೆ ಮಾಡುತ್ತಿದೆ. ಸರ್ಕಾರದ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಇದನ್ನೆಲ್ಲಾ ಮನಗಂಡು ಮತದಾರರು ಬಿಜೆಪಿ ಪರ ಓಟು ಹಾಕಲಿದ್ದಾರೆ ಎಂದರು. ಕಾಂಗ್ರೆಸ್‍ನವರು ಬಿಡುಗಡೆ ಮಾಡಿದ ಡೈರಿ ಬಗ್ಗೆ ಪ್ರತಿಕ್ರಯಿಸಿದ ಅವರು, ಅದೊಂದು ದುರುದ್ದೇಶ ಪೂರಿತವಾಗಿ ಬಿಡುಗಡೆ ಮಾಡಿರುವ ನಕಲಿ ಡೈರಿ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link