ತುಮಕೂರು:
ನೈಸರ್ಗಿಕವಾಗಿದೊರೆಯುವ ಸಂಪನ್ಮೂಲಗಳನ್ನು ಅಗತ್ಯಕ್ಕೆತಕ್ಕಂತೆ ಬಳಸಿಕೊಳ್ಳಬೇಕು. ನೀರು ಮತ್ತು ವಿದ್ಯುತ್‍ನ್ನುಕಡಿಮೆ ಪ್ರಮಾಣದಲ್ಲಿ ಬಳಸುವ ಮನೋಭಾವವಿದ್ಯಾರ್ಥಿಗಳು ಬರಬೇಕು, ಆಗ ಮಾತ್ರ ಪರಿಸರವನ್ನು ಸಮತೋಲವಾಗಿ ಇಟ್ಟುಕೊಳ್ಳಲು ಸಾಧ್ಯಎಂದುಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದಡಾ.ಎಂ ಕೆ ವೀರಯ್ಯ ನುಡಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿರಿಂಗ್ ವಿಭಾಗ ಮತ್ತು ಭಾರತೀಯಗ್ರೀನ್ ಬಿಲ್ಡಿಂಗ್‍ಕೌನ್ಸಿಲ್, ಬೆಂಗಳೂರು ಕೇಂದ್ರದಸಂಯುಕ್ತಾಶ್ರಯದಲ್ಲಿಏರ್ಪಡಿಸಲಾಗಿದ್ದ ‘ವಿಶ್ವ ಜಲ ದಿನ ಹಾಗೂ ಎಸ್‍ಎಸ್‍ಐಟಿ ಐಜಿಬಿಸಿ ವಿದ್ಯಾರ್ಥಿಅಧ್ಯಯನ’ಕಾರ್ಯಕ್ರಮದಉದ್ಘಾಟನಾಸಮಾರಂಭದಲ್ಲಿ ಮಾತನಾಡಿದರು.
ಅಮೂಲ್ಯ ಸಂಪನ್ಮೂಲವಾದ ನೀರಿನಕೊರತೆಯನ್ನು ಈಗಾಗಲೇ ದೇಶದ ಹಾಗೂ ರಾಜ್ಯದಉತ್ತರ ಭಾಗಗಳಲ್ಲಿಕಾಣುತ್ತಿದ್ದೇವೆ. ಆದ್ದರಿಂದ ನೀರನ್ನು ಸಮರ್ಪಕವಾಗಿಮತ್ತು ಮಿತವಾಗಿ ಬಳಸಬೇಕು ಎಂದು ವಿದ್ಯಾರ್ಥಿಗಳಿಗೆಪ್ರಾಂಶುಪಾಲರಾದಸೂಚಿಸಿದರು.
ಹೊಸ ವಿಷಯದಅಧ್ಯಯನಮುಂದುವರಿದಾಗದೇಶಅಭಿವೃದ್ದಿಯ ಪಥದಲ್ಲಿ ಸಾಗುತ್ತದೆ. ತಂತ್ರಜ್ಞಾನ ಮುಂದುವರಿದಂತೆ ಬದಲಾಗವಣೆಯನ್ನು ತಂದುಕೊಳ್ಳುವುದು ಮುಖ್ಯ. ಹೊಸ ವಿಚಾರಗಳನ್ನು ಜನರಿಗೆ ತಿಳಿಸುವುದರಿಂದ ಮತ್ತುಜಾಗೃತಿ ಮೂಲಕ ಅಭಿವೃದ್ದಿ ಸಾಧ್ಯ. ಈ ದಿಶೆಯಲ್ಲಿ ಭಾರತೀಯಗ್ರೀನ್ ಬಿಲ್ಡಿಂಗ್‍ಕೌನ್ಸಿಲ್‍ಕಾರ್ಯನ್ಮೋಖವಾಗಿದೆಎಂದುಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದಭಾರತೀಯಗ್ರೀನ್ ಬಿಲ್ಡಿಂಗ್‍ಕೌನ್ಸಿಲ್‍ನತಾಂತ್ರಿಕ ನಿರ್ದೇಶಕ ನೂರುಪ್, ವಿದ್ಯಾರ್ಥಿಗಳಿಗೆ ಹಸಿರು ಕಟ್ಟಡಗಳು ಬಳಸುವಿಕೆಯಿಂದ ಆಗುವ ಉಪಯುಕ್ತತೆಯ ಬಗ್ಗೆ ತಿಳಿಸಿಕೊಟ್ಟರಲ್ಲದೆ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿಸಾಹೆ ರಿಜಿಸ್ಟ್ರಾರ್‍ಡಾ.ಎಂ.ಝಡ್.ಕುರಿಯನ್ ಮಾತಣಾಡಿ,ಸಮಾಜದಲ್ಲಿ ನೀರು ಮತ್ತು ವಿದ್ಯುತ್‍ನ್ನು ಅನುಪಕ್ತತೆಯನ್ನುತಡೆಗಟ್ಟಿದರೆಅದುಒಂದುರೀತಿಯಲ್ಲಿದೇಶ ಸೇವೆಯಾಗುತ್ತದೆಎಂದರು.
ಕಾರ್ಯಕ್ರಮದಲ್ಲಿಭಾರತೀಯಗ್ರೀನ್ ಬಿಲ್ಡಿಂಗ್‍ಕೌನ್ಸಿಲ್‍ನಸಹ ಸಂಚಾಲಕರಾದ ಸಶೋಕ್‍ಕುಮಾರ್, ಕಾಲೇಜಿನ ಡೀನ್‍ಡಾ.ಎಂ.ಸಿದ್ದಪ್ಪ,ಆಡಳಿತಾಧಿಕಾರಿ ಡಾ.ವೈಎಮ್.ರೆಡ್ಡಿ, ಸಿವಿಲ್ ವಿಭಾಗದ ಮುಖ್ಯಸ್ಥಡಾ. ಟಿವಿ ಮಲ್ಲೇಶ್, ಪ್ರೊ. ಬಿ.ಎಚ್ ಮಂಜುನಾಥ, ಪ್ರೊಗುರುಪ್ರಸಾದ್‍ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
