ದಾವಣಗೆರೆ :
ಇನ್ನೂ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಇರುವ ಗೊಂದಲಗಳನ್ನು ನೋಡಿದರೆ, ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಗಿ ಕಣಕ್ಕಿಳಿಯಲು ಕಾಂಗ್ರೆಸ್‍ನವರು ಹೆದರಿದಂತೆ ಕಾಣುತ್ತಾರೆಂದು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಇರುವ ಗೊಂದಲ ನೋಡಿದರೆ ಬಿಜೆಪಿ ಪಕ್ಷದೆದುರು ನಿಲ್ಲಲು ಹೆದರಿದ್ದಾರೆಂಬ ಭಾವನೆ ನನ್ನದಾಗಿದೆ ಎಂದರು.
ಅಪ್ಪ ಮಗನ ಮೇಲೆ, ಮಗ ಅಪ್ಪನ ಮೇಲೆ ಹೀಗೆ ಕಾಂಗ್ರೆಸ್‍ನ ಅಭ್ಯರ್ಥಿಯಾರೆಂಬುದೇ ಇನ್ನೂ ಸರಿಯಾಗಿ ತೀರ್ಮಾನವಾಗಿಲ್ಲ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡುವುದಾಗಿ ಹೇಳುತ್ತಿದ್ದಾರೆ. ಮುಂದಿನ ದಿನ ಏನಾಗುವುದೋ ನೋಡೋಣ. ಅವರು ಧೈರ್ಯದಿಂದ ಯಾವುದಕ್ಕೂ ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ನಿಲ್ಲಲಿ ಎಂದರು.
ಕಾಂಗ್ರೆಸ್‍ನಿಂದ ಯಾರಾದರೂ ನಿಲ್ಲಲಿ. ಯಾರು ಯೋಗ್ಯರೆಂದು ನಾವೇನೂ ಸರ್ಟಿಫಿಕೇಟ್ ಕೊಡಲ್ಲ. ಆದರೆ, ಹಿಂದೆ ಮೂರು ಬಾರಿ ಸೋತವರು ನಿಂತುಕೊಂಡರೆ ಒಳ್ಳೆಯದು ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೆಸರು ಹೇಳದೆಯೇ ಕಾಲೆಳೆದರು.
ನಮ್ಮ ಪಕ್ಷದಿಂದ ಸಿದ್ದೇಶ್ವರ ಅವರು ಮೂರಿ ಬಾರಿ ನಿಂತು ಗೆಲುವು ಸಾಧಿಸಿದ್ದಾರೆ. ಹಾಗಾಗಿ ಮೊದಲಿನಿಂದಲ್ಲೂ ಗೆಲುವನ್ನೇ ಕಂಡವರಿಗೆ ಪ್ರಥಮಾದ್ಯತೆ ನೀಡಬೇಕೆಂಬುದು ಪಕ್ಷದ ಸಂದೇಶ ಮತ್ತು ಆದೇಶವಾಗಿದೆ. ಆದ್ದರಿಂದ ಈಗ ನಾಲ್ಕನೇ ಬಾರಿಯೂ ಅವರಿಗೇ ಟಿಕೆಟ್ ಸಿಕ್ಕಿದೆ. ಆಗ ಭೀಮಸಮುದ್ರ ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿದುದರಿಂದ ಸಿದ್ದೇಶ್ವರ ಅಭ್ಯರ್ಥಿಯಾಗಿದ್ದರು. ಹಾಗಾದರೆ 78ರಲ್ಲಿ ಕಾಂಗ್ರೆಸ್‍ನವರು ಇಂದಿರಾ ಗಾಂಧಿ ಮತ್ತಿತರನ್ನು ಬೇರೆಕಡೆಯಿಂದ ಎಕೆ ಚುನಾವಣೆಗೆ ನಿಲ್ಲಿಸಿದ್ದರು ಎಂದು ಇತ್ತೀಚೆಗೆ ಸ್ಥಳೀಯ ಬಿಜೆಪಿಯಲ್ಲಿ ಗಂಡಸರ್ಯಾರು ಇಲ್ಲವೇ? ಎಂದು ಪ್ರಶ್ನಿಸಿದ್ದ ಮಲ್ಲಿಕಾರ್ಜುನ್‍ಗೆ ತಿರುಗೇಟು ನೀಡಿದರು.
ರಾಜಕಾರಣದಲ್ಲಿ ಶಾಮನೂರು ಶಿವಶಂಕರಪ್ಪ ಉತ್ಸಾಹದಿಂದ ಇರಬಹುದು. ಆದರೆ, ಜನ ಓಟು ಹಾಕಲ್ಲ. ಅವರು ಉತ್ಸಾಹದಿಂದ ಇರಲಿ. ನಾವೂ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಸಿದ್ದೇಶ್ವರ್ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
