ಹಿರಿಯೂರು :
ಯುವಸಂಘಗಳನ್ನು ಕಟ್ಟಿದರೆ ಸಾಲದು, ಸಂಘಗಳ ಸದಸ್ಯರು ಯಾವಾಗಲೂ ಏನಾದರೊಂದು ಚಟುವಟಿಕೆಗಳಲ್ಲಿ ತೊಡಗಿಕೊಂಡು ಸದಾ ಕ್ರೀಯಾಶೀಲರಾಗಿರಬೇಕು ಎಂಬುದಾಗಿ ದೊಡ್ಡಘಟ್ಟ ಗ್ರಾಮದ ಸ್ವಾಮಿವಿವೇಕಾನಂದ ಗ್ರಾಮೀಣಾಭಿವೃದ್ಧಿಸಂಸ್ಥೆ ಅಧ್ಯಕ್ಷರಾದ ಎಸ್.ರಂಗಸ್ವಾಮಿ ಯುವಜನತೆಗೆ ಕರೆ ನೀಡಿದರು.
ತಾಲ್ಲೂಕಿನ ದೊಡ್ಡಘಟ್ಟ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಶ್ರೀಸ್ವಾಮಿವಿವೇಕಾನಂದ ನಗರ ಹಾಗೂ ಗ್ರಾಮೀಣಾಭಿವೃದ್ಧಿಸಂಸ್ಥೆ ದೊಡ್ಡಘಟ್ಟ, ಶ್ರೀ ಕನ್ನಡಾಂಬೆ ಸಾಂಸ್ಕøತಿಕ ಹಾಗೂ ಕ್ರೀಡಾ ಮಹಿಳಾಮಂಡಳಿ ದೊಡ್ಡಘಟ್ಟ, ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನೆರೆಹೊರೆ ಯುವಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನಾಂಗ ಸ್ವಾಮಿವಿವೇಕಾನಂದ, ಭಗತ್‍ಸಿಂಗ್, ಡಾ||ಅಂಬೇಡ್ಕರ್, ಮಹಾತ್ಮಗಾಂಧಿ, ಬಸವಣ್ಣ, ಬುದ್ಧ ಇಂತಹ ಮಹಾನ್ ವ್ಯಕ್ತಗಳ ಆದರ್ಶಗಳನ್ನು ಅವರ ತತ್ವಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದಾಗಿ ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೂನಿಕೆರೆ ಗ್ರಾಮಪಂಚಾಯಿತಿ ಬಿಲ್‍ಕಲೆಕ್ಟರ್ ಆರ್.ರವಿ ಮಾತನಾಡಿ, ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ಕೊಡಬೇಕು, ತಮ್ಮ ಮನೆಯ ಸುತ್ತ, ಸಾರ್ವಜನಿಕ ಆಸ್ತಿಗಳ ಹತ್ತಿರ ಸ್ವಚ್ಛತೆಯ ಕಡೆ ವಿಶೇಷ ಗಮನ ಹರಿಸಬೇಕು, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡು ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿ ಮಾಡಿ, ಮಾದರಿ ಗ್ರಾಮವನ್ನಾಗಿ ಮಾಡಲು ಯುವ ಜನತೆಗೆ ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕರಾದ ಚನ್ನವೀರಯ್ಯ ಬೇವಿನಹಳ್ಳಿಮಠರವರು ಮಾತನಾಡಿ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ, ಜಲಸಂರಕ್ಷಣೆ ಇಂತಹ ಉತ್ತಮ ಕಾರ್ಯಗಳಲ್ಲಿ ಯುವಜನರು ಗಮನಹರಿಸುವುದರಿಂದ ಸ್ವಚ್ಛಭಾರತ್ ಕಾರ್ಯಕ್ರಮವು ಒಂದು ಅರ್ಥಪೂರ್ಣವಾಗುತ್ತದೆ ಯುವಜನತೆಗೆ ಸಮಾಜಮುಖಿ ಕೆಲಸಕ್ಕೆ ಹೆಚ್ಚು ಒತ್ತು ನೀಡಿ, ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ರಾಜ್ಯ ಯುವಪ್ರಶಸ್ತಿ ಪುರಸ್ಕತರಾದ ಆರ್.ಲಕ್ಷ್ಮಕ್ಕ, ಶ್ರೀಸ್ವಾಮಿವಿವೇಕಾನಂದ ಸಾಂಸ್ಕತಿಕ ಹಾಗೂ ಕ್ರೀಡಾ ಯುವಕಸಂಘ ಕಾರ್ಯದರ್ಶಿ ಎಂ.ರಾಮಚಂದ್ರಪ್ಪ, ನಿರ್ದೇಶಕರು ಆರ್.ಗುರುಮೂರ್ತಿ, ಎಸ್.ಡಿ.ಎಂ.ಸಿ ಮಾಜಿಅಧ್ಯಕ್ಷರು ರಂಗಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ, ಶಾಲೆಯ ಸಹಶಿಕ್ಷಕರು ಅಡುಗೆ ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು, ಯುವಜನತೆ, ಗ್ರಾಮಸ್ಥರು ಉಪಸ್ಥಿತರಿದ್ದರು.
ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಹಶಿಕ್ಷಕಿ ಸಿ.ಆರ್.ಲಕ್ಷ್ಮೀಬಾಯಿ ಸ್ವಾಗತಿಸಿದರು. ಶ್ರೀಮತಿ ಜಿ.ರತ್ನಮ್ಮ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
