ಮೈಸೂರು:

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯದಲ್ಲಿ ಹುಲಿಗಳ ನಡುವಿನ ಕಾದಾಟ ನಡೆದು, ಸುಮಾರು 8 ವರ್ಷದ ಹೆಣ್ಣು ಹುಲಿ ಹೆಣ್ಣು ಹುಲಿಯೊಂದು ಮೃತಪಟ್ಟಿದೆ.
ತನ್ನ ಆವಾಸ ಸ್ಥಾನದ ಉಳಿವಿಗಾಗಿ ಹುಲಿಗಳ ನಡುವಿನ ಕಾದಾಟದಲ್ಲಿ ಹೋರಾಟ ನಡೆಸಿದ 8 ವರ್ಷದ ಹುಲಿ ನಾಗರಹೊಳೆ ವಲಯದ ಕುಂತೂರು ಬೀಟ್ನಲ್ಲಿ ಮೃತಪಟ್ಟಿದೆ.
3 ಕಡೆ ಮೂಳೆ ಮುರಿದಿರುವುದು ಶವ ಪರೀಕ್ಷೆ ವೇಳೆ ತಿಳಿದುಬಂದಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಸ್ಥಳಕ್ಕೆ ಸಿ.ಎಫ್. ನಾರಾಯಣಸ್ವಾಮಿ, ಎಸಿಎಫ್ ಪೌಲ್ ಅಂತೋಣಿ, ವಲಯ ಅರಣ್ಯಾಧಿಕಾರಿ ಅಮಿತ್ಗೌಡ, ಸ್ವಯಂ ಸೇವಾ ಸಂಸ್ಥೆಯ ರಾಜ್ಕುಮಾರ್, ವೈಲ್ಡ್ಲೈಫ್ ವಾರ್ಡನ್ ಮಡಿಕೇರಿಯ ಮಾದಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2 ದಿನಗಳ ಹಿಂದೆಯಷ್ಟೇ ಇದೇ ವಲಯದಲ್ಲಿ ಹುಲಿಗಳ ನಡುವೆ ಕಾಳಗ ನಡೆದು ಹೆಣ್ಣು ಹುಲಿ ಮೃತಪಟ್ಟಿತ್ತು, ಈಗ ಮತ್ತೊಂದು ಹೆಣ್ಣು ಹುಲಿ ಮೃತಪಟ್ಟಿರುವುದು ನಷ್ಟ ಎನ್ನಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








