ಹುಳಿಯಾರು ಹೋಬಳಿಯ ನೂರಾರು ಮಂದಿ ಬಿಜೆಪಿ ಸೇರ್ಪಡೆ

ಹುಳಿಯಾರು:

      ಹುಳಿಯಾರು ಸಮೀಪದ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕøತಿಕ ಸದನದಲ್ಲಿ ಏರ್ಪಡಿಸಿದ್ದ ಹುಳಿಯಾರು ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.

     ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರು ವಿರೋಧ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿ ತುಮಕೂರು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅಪಾರ. ಯಾವ ಗ್ರಾಮಕ್ಕೆ ತೆರಳಿದರೂ ಜನರು ಮೋದಿ ಅವರ ಹೆಸರು ಹೇಳುತ್ತಿದ್ದಾರೆ. ಮೋದಿ ಅವರ ಜನಪರ ಯೋಜನೆ ಮೆಚ್ಚಿ ಮತ್ತೆ ಅವರನ್ನು ಪ್ರಧಾನಿ ಮಾಡಲು ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ಯುವ ಜನತೆ ಸೋಷಿಯಲ್ ಮೀಡಿಯಾದಲ್ಲಿ ಮೋದಿ ಪರ ಪ್ರಚಾರ ಮಾಡುತ್ತಿದ್ದಾರೆ. ಇದು ನನ್ನ ಗೆಲುವಿಗೆ ಶ್ರೀರಕ್ಷೆಯಾಗುತ್ತದೆ ಎಂದರು.

     ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿಗೆ ಬರಬೇಕಿದ್ದ ಹೇಮಾವತಿಗೆ ಅಡ್ಡಿಪಡಿಸಿದ್ದರು. ಅವರು ಅಂದು ಹೇಮೆ ಹರಿಸಲು ಸಮ್ಮತಿ ಕೊಟ್ಟಿದ್ದರೆ ಇಂದು ಒಣಗಿರುವ ಲಕ್ಷಾಂತರ ತೆಂಗಿನ ಮರಗಳು ಉಳಿಯುತ್ತಿದ್ದವು. ಅಂತರ್ಜಲ ವೃದ್ದಿಯಾಗಿ ರೈತನ ಬದುಕು ಹಸನಾಗುತ್ತಿತ್ತು ಎಂದರಲ್ಲದೆ ದೇವೇಗೌಡರ ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸಿಬೇಕಿದೆ. ಮಕ್ಕಳು, ಸೊಸೆಯಂದಿರು, ಬೀಗರು, ಮೊಮ್ಮಕ್ಕಳು ಹೀಗೆ ಮನೆಯಲ್ಲಿಯೇ ಮುಖ್ಯಮಂತ್ರಿ, ಸಚಿವರು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ಹೀಗೆ ಎಲ್ಲರನ್ನೂ ಒಳಗೊಂಡು ಹಾಸನದಿಂದ ಇದೀಗ ತುಮಕೂರಿಗೆ ಹೆಜ್ಜೆ ಹಾಕಿರುವ ದೇವೇಗೌಡರನ್ನು ಈ ಬಾರಿ ಸೋಲಿಸಬೇಕಿದೆ ಎಂದು ಕರೆ ನೀಡಿದರು.

      ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಮಾತನಾಡಿ ಲೋಕಸಭಾ ಚುನಾವಣೆ ಮುಗಿದ ತಕ್ಷಣ ರಾಜ್ಯ ಸರ್ಕಾರ ಬಿದ್ದೋಗಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆಗ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಸಚಿವರಾಗುವುದು ನಿಶ್ಚಿತ. ಹಾಗಾಗಿ ಎಲ್ಲರೂ ಬಿಜೆಪಿ ಜೊತೆಗಿದ್ದು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಕ್ಷೇತ್ರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿಶೇಷ ಅನುಧಾನಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದರು.

     ಕಂದಿಕೆರೆ ಜಿಪಂ ಮಾಜಿ ಸದಸ್ಯೆ ಲೋಹಿತಾಬಾಯಿ ಅವರು ಮಾತನಾಡಿ ಲಂಬಾಣಿ ಜನಾಂಗ ಸೇರಿದಂತೆ ಅನೇಕ ಸಣ್ಣಪುಟ್ಟ ಜಾತಿಗಳಿಗೆ ಹಿಂದೆ ಯಡಿಯೂರಪ್ಪರ ರಾಜ್ಯ ಸರ್ಕಾರ ಮತ್ತು ಈಗಿನ ಮೋದಿ ಸರ್ಕಾರ ಯೋಜನೆಗಳನ್ನು ತಂದಿದೆ. ಇವುಗಳನ್ನು ಹಳ್ಳಿಹಳ್ಳಿಗಳಲ್ಲಿ ಮಾತನಾಡಿ ಬಿಜೆಪಿ ಅಭ್ಯರ್ಥಿ ಬಸವರಾಜು ಅವರನ್ನು ಗೆಲ್ಲಿಸುವಂತೆ ಮತದಾರರ ಮನವೊಲಿಸಬೇಕು ಎಂದರಲ್ಲದೆ ಕಾರ್ಯಕರ್ತರು ತಾನೇ ಅಭ್ಯರ್ಥಿಯೆಂದು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ ಬಿಜೆಪಿ ಗೆಲುವು ಸುಲಭ ಸಾಧ್ಯ ಎಂದರು.

     ಈ ಸಂದರ್ಭದಲ್ಲಿ ಶಾಸಕ ಜೆ.ಸಿ.ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ ಭಾಜಪದ ಅಧ್ಯಕ್ಷ ಶಶಿಧರ್, ಕಾರ್ಯದರ್ಶಿ ನಿರಂಜನ್, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ, ಕಂದಿಕೆರೆ ಜಿಪ ಸದಸ್ಯೆ ಮಂಜುಳಮ್ಮ, ಜಿಪಂ ಮಾಜಿ ಸದಸ್ಯೆ ಲಕ್ಷ್ಮಿಅಂದಾನಪ್ಪ, ರಾಮಣ್ಣ, ತಾಲೂಕು ಪಂಚಾಯಿತಿ ಸದಸ್ಯ ಕೇಶವ ಮೂರ್ತಿ, ಕೆಂಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ತಾಪಂ ಮಾಜಿ ಅಧ್ಯಕ್ಷ ಸೀತಾರಾಮು, ವಸಂತಕುಮಾರ್, ಹೊಸಳ್ಳಿ ಜಯಣ್ಣ, ಮೋಹನ್, ಬರಕನಾಳ್ ವಿಶ್ವನಾಥ್, ಸುವರ್ಣಮ್ಮ, ಮೇಲನಹಳ್ಳಿ ಮೋಹನ್, ಬ್ಯಾಂಕ್ ಮರುಳಪ್ಪ, ಪಪಂ ಸದಸ್ಯರಾದ ಹೇಮಂತ್, ಕೋಳಿ ಶ್ರೀನಿವಾಸ, ಡಾಬಾ ಸೂರಪ್ಪ, ಕಾಯಿ ಕುಮಾರ್, ವಳಗೆರೆಹಳ್ಳಿ ಚಂದ್ರಶೇಖರ್, ಕೆ.ಕೆ.ಹನುಮಂತಪ್ಪ, ಫೈರೋಜ್, ಬೇವಿನಹಳ್ಳಿ ಚನ್ನಬಸವಯ್ಯ, ನಂದಿಹಳ್ಳಿ ಶಿವಣ್ಣ ಮತ್ತಿತರರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap