ಹೊಸದುರ್ಗ:
ಮನೆಯನ್ನು ಶಾಲೆಗೆ ಹೋಲಿಕೆ ಮಾಡಿದರೆ ತಾಯಿಯನ್ನು ಭೂಮಿತಾಯಿಗೆ ಹೋಲಿಕೆ ಮಾಡುತ್ತಾರೆ ಎಂದು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯಪ್ಪ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಇಲಾಖೆ, ತಾಲ್ಲೂಕು ಸ್ರೀ ಶಕ್ತಿ ಒಕ್ಕೂಟ ಇವರ ಸಂಯುಕ್ತಾಶ್ರಾಯದಲ್ಲಿ ನಡೆದ ಅಂತರಾಸ್ಟ್ರಿಯಾ ಮಹಿಳಾ ದಿನಾಚರಣೆ ಅಂಗವಾಗಿ ಮತದಾನ ಜಾಗೃತಿ ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾನೂನು ಮಾಹಿತಿ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸಂಸೃತಿಯ ಪ್ರಕಾರ ಮಹಿಳೆಯರಿಗೆ ಅತೀ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂದು ಸಂವಿಧಾನದಲ್ಲಿದೆ. ಆದರೆ ಈಗಿನ ಕಾಲದಲ್ಲಿ ಮಹಿಳೆಯರು ಅತಿ ಹೆಚ್ಚು ಶೋಷಿತಗೊಳಗಾಗುತ್ತಿರುವುದನ್ನು ನಾವೆಲ್ಲಾ ಕಾಣಬಹುದು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಳಿತ ವ್ಯವಸ್ಥೆಯಲ್ಲಿ ಮಹಿಳೆಯರು ಇದ್ದಾರೆ. ತಾಲ್ಲೂಕು ಪಂ ಮತ್ತು ಗ್ರಾಮ ಪಂ ವತಿಯಲ್ಲಿ ದೇಶ ಸೇವೆ ಮಾಡಲೆಂದು ಮಹಿಳೆಯರಿಗೆ ಶೇ 50% ಮೀಸಲಾತಿಯನ್ನು ನೀಡಲಾಗಿದೆ. ಹಾಗೆ ಎಂಎಲ್ಎ ಹಾಗೂ ಎಂಪಿ ಕೋಟದಲ್ಲಿ ಶೇ 33% ಮೀಸಲಾತಿಯನ್ನು ನೀಡಲು ಮಾಡಿದ್ದಾರೆ.
ಒಂದು ಹೆಣ್ಣು ಶಿಕ್ಷಣ ವಂಚಿತಳಾಗದೇ ವಿದ್ಯಾಭ್ಯಾಸ ಮಾಡಬೇಕು. ವಿದ್ಯಾಬ್ಯಾಸ ಮಾಡಿದರೆ ಮನೆ ಬೆಳಕಾಗುತ್ತದೆ. ಹೆಣ್ಣು ಅಂತರಾಷ್ಟ್ರಿಯಾ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದಾಳೆ, ಹೆಣ್ಣು-ಗಂಡು ಸಮನಾಗಿದ್ದರೆ ದೇಶ ಚೆನ್ನಾಗಿರುತ್ತದೆ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಕರಾದ ಶ್ರೀಮತಿ ರಾಧ ಮಾತನಾಡಿ ಮಹಿಳಾ ದಿನಾಚರಣೆಗೆ 100 ವರ್ಷ ಇತಿಹಾಸವಿದೆ. ಮಹಿಳೆ ಎಲ್ಲಾ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾಳೆ. ಪ್ರತಿಯೊಬ್ಬ ಮಹಿಳೆ ಕ್ರಾಂತಿಯನ್ನು ಮಾಡಬೇಕು. ಕಷ್ಟದಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಸ್ಪಂದಿಸಿವ ಕಾರ್ಯ ನಡೆಯಬೇಕು ಎಂದು ಹೇಳಿದರು.
ಮಹಿಳೆಯರಿಗೆ ಮಹಿತಿ ಕೊರತೆ ಕಡಿಮೆ ಇರುತ್ತದೆ ಅದನ್ನು ಕಾನೂನು ರೂಪದಲ್ಲಿ ತಿಳಿಸುವ ಕಾರ್ಯ ಮಾಡಬೇಕು. ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಶೋಷಣೆಗೆ ಒಳಾಗಾಗುವುದನ್ನು ತಪ್ಪಿಸಿ ಮಹಿಳೆಯರ ಬಗ್ಗೆ ಧ್ವನಿ ಎತ್ತಬೇಕು ಎಂದು ಹೇಳಿದರು.
ತಾ.ಪಂ.ಕಾರ್ಯನಿರ್ವಾಹಕರಾದ ಮಹಮದ್ ಮುಬೀನ್, ಮುಖ್ಯ ಅತಿಥಿಗಳಾದ ಅಂಗವಿಕಲ ಕಲ್ಯಾಣಾಧಿಕಾರಿ ಶ್ರೀಮತಿ ವೈಶಾಲಿ, ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀಮತಿ ಕವಿತ, ಸಂರಕ್ಷಣಾಧಿಕಾರಿ ಶ್ರೀದೇವಿ, ತಾಲ್ಲೂಕು ಸ್ರೀ ಸಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಅಂಬುಜ ಹಾಗೂ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೋಂಡಿದ್ದರು ಹಾಗೂ ಮುತ್ತುರಾಜ್ ಉಪನ್ಯಾಸ ನೀಡಿದರು.
ಇದೇ ವೇಳೆ 50 ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ನಡೆಯಿತು. ಸ್ವಾಗತವನ್ನು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಮತಿ ಸುಜಾತ ಮಾಡಿದರು ಮತ್ತು ನಿರೂಪಣೆಯನ್ನು ಶ್ರೀಮತಿ ಭಾರತಿ ನಡೆಸಿಕೊಟ್ಟರು.