ಕುಟುಂಬ ರಾಜಕಾರಣ : ಕೆಎನ್ಆರ್ ಗೆ ಸಚಿವ ವಾಸು ಟಾಂಗ್!!!

ತುಮಕೂರು:

      ಕುಟುಂಬ ರಾಜಕರಣ ಬಗ್ಗೆ ಮಾತನಾಡೋರು ಮೊದಲು ನಾವು ಸರಿ ಇದ್ದೀವಾ ಎಂದು ನೋಡಿಕೊಳ್ಳಬೇಕು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ರಿಗೆ ಸಚಿವ ಎಸ್ ಆರ್ ಶ್ರೀ ನಿವಾಸ್ ರವರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

     ತುಮಕೂರಿನಲ್ಲಿ ಮಾತನಾಡಿದ ಸಚಿವರು, ಕೆ.ಎನ್.ರಾಜಣ್ಣರ ಪತ್ನಿ ಹಾಗೂ ಪುತ್ರ ಚುನಾವಣೆ ಗೆ ಸ್ಪರ್ಧಿಸಿದ್ದನ್ನ ನೆನೆಪಿಸಿ, ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಮೊದಲು ನಾವು ಸರಿ ಇದ್ದೀವಾ ಅಂತಾ ನೋಡಿಕೊಳ್ಳಬೇಕು ಎಂದು ನಯವಾಗಿ ತಿವಿದಿದ್ದಾರೆ.

      ಕೆ.ಎನ್. ರಾಜಣ್ಣ ಅವರು ನೀಡಿದ ರೆಡ್ ಲೈಟ್ ಹೇಳಿಕೆ ಬಗ್ಗೆ ನಾನೇನೂ ಪ್ರತಿಕ್ರಿಯಿಸಲ್ಲ. ಅವರು ದೊಡ್ಡವರು. ಅಂಥವರ ವಿವಾದಿತ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ