ಬೆಂಗಳೂರು
ಬೆಂಗಳೂರು ಉತ್ತರ ಲೋಕಸಭಾಕ್ಷೇತ್ರದ ಚುನಾವಣಾ ವಿಚಾರ ಸಂಬಂಧ ಬೆಂಗಳೂರು ಉತ್ತರ ಲೋಕಸಭಾಕ್ಷೇತ್ರದ ಪ್ರಮುಖ ನಾಯಕರ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಇಂದು ನಡೆಯಿತು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಕೃಷ್ಣಭೈರೇಗೌಡ, ಶಾಸಕರಾದಎಸ್.ಟಿ ಸೋಮಶೇಖರ್, ಭೈರತಿ ಸುರೇಶ್, ಭೈರತಿ ಬಸವರಾಜು, ಅಖಂಡ ಶ್ರೀನಿವಾಸ್ ಮೂರ್ತಿ ಹಾಗೂ ಜಿಲ್ಲಾಧ್ಯಕ್ಷ ಎಂ. ರಾಜಕುಮಾರ್ ಹಾಗೂ ಪ್ರಮುಖ ನಾಯಕರು ಭಾಗವಹಿಸಿದ್ದರು.ಬೆಂಗಳೂರು ಉತ್ತರ ಲೋಕಸಭಾಕ್ಷೇತ್ರದ ಗೆಲುವಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆದಿದೆ.ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ, ದಾಸರಹಳ್ಳಿ ಶಾಸಕ ಮಂಜುನಾಥ್ಅವರಿಗೂ ಸಹ ಆಹ್ವಾನ ನೀಡಲಾಗಿತ್ತು.
ಕಾಂಗ್ರೆಸ್ ಮತ್ತುಜೆಡಿಎಸ್ ಮೈತ್ರಿ ಪಕ್ಷಗಳು ಕ್ಷೇತ್ರ ಹಂಚಿಕೆ ಸಂದರ್ಭದಲ್ಲಿ ಬೆಂಗಳೂರು ಉತ್ತರ ಲೋಕಸಭೆಕ್ಷೇತ್ರವನ್ನುಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿತ್ತು. ಸೂಕ್ತ ಅಭ್ಯರ್ಥಿ ಸಿಗದ ಹಿನ್ನೆಲೆಜೆಡಿಎಸ್ಕ್ಷೇತ್ರವನ್ನುಕಾಂಗ್ರೆಸ್ ಗೆ ಬಿಟ್ಟುಕೊಟ್ಟಿತ್ತು.ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಕಾವೇರಿಯಲ್ಲಿ ನಡೆದ ಸಭೆಯಲ್ಲಿಕೃಷ್ಣಬೈರೇಗೌಡಅವರನ್ನುಅಭ್ಯರ್ಥಿಯಾಗಿ ಅಂತಿಮಗೊಳಿಸಲಾಗಿದ್ದು, ನಿನ್ನೆಅವರು ನಾಮಪತ್ರಕೂಡ ಸಲ್ಲಿಸಿದ್ದಾರೆ.ಕಾಂಗ್ರೆಸ್ ಗೆ ಪ್ರತಿಷ್ಠೆಯಾಗಿರುವ ಬೆಂಗಳೂರು ಉತ್ತರಕ್ಷೇತ್ರವನ್ನುಗೆಲ್ಲಲೇ ಬೇಕೆಂದುಕಾಂಗ್ರೆಸ್ ನಾಯಕರು, ಈ ಭಾಗದ ಶಾಸಕರಿಗೆ ಸೂಚನೆ ನೀಡಿದ್ದಾರೆಎನ್ನಲಾಗಿದೆ.
ಹಾಗಾಗಿ, ಜೆಡಿಎಸ್ಜೊತೆ ಹೊಂದಾಣಿಕೆ ಮಾಡಿಕೊಂಡುಚುನಾವಣಾ ಪ್ರಚಾರ ಹೇಗೆ ನಡೆಸಬೇಕು ಮತ್ತಿತರಕಾರ್ಯಕತಂತ್ರದಕುರಿತು ಇಂದಿನ ಸಭೆಯಲ್ಲಿಚರ್ಚೆಯಾಗಿದೆಎಂದು ತಿಳಿದುಬಂದಿದೆ.