ತುಮಕೂರು
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದು ನಡೆದ ನಾಮಪತ್ರ ಪರಿಶೀಲನೆಯಲ್ಲಿ 19 ಅಭ್ಯರ್ಥಿಗಳ ನಾಮಪತ್ರ ಸಿಂಧುತ್ವಗೊಂಡಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಜನತಾದಳ(ಜಾತ್ಯತೀತ) ಅಭ್ಯರ್ಥಿ ಹಾಸನ ಜಿಲ್ಲೆ ಪಡವಲಹಿಪ್ಪೆ ಗ್ರಾಮದ ಹೆಚ್.ಡಿ.ದೇವೇಗೌಡ ಬಿನ್ ದೊಡ್ಡೇಗೌಡ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ತುಮಕೂರು ಗಾಂಧಿ ನಗರದ ಜಿ.ಎಸ್.ಬಸವರಾಜ್ ಬಿನ್ ಲೇ.ಸಿದ್ದಪ್ಪ, ಭಾರತ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಬೆಂಗಳೂರಿನ ಎನ್.ಶಿವಣ್ಣ ಬಿನ್ ಲೇ.ಕೋಡಯ್ಯ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಬೆಂಗಳೂರಿನ ಕೆ.ಸಿ.ಹನುಮಂತರಾಯ ಬಿನ್ ಚೌಡಯ್ಯ, ಉತ್ತಮ ಪ್ರಜಾಕೀಯ ಪಾರ್ಟಿಯ ಅಭ್ಯರ್ಥಿ ಬೆಂಗಳೂರಿನ ಎಂ.ಆರ್.ಛಾಯಾಮೋಹನ್ ಕೋಂ. ಮೋಹನಕೃಷ್ಣ, ಅಂಬೇಡ್ಕರ್ ಸಮಾಜ್ ಪಾರ್ಟಿ ಅಭ್ಯರ್ಥಿ ಮಧುಗಿರಿ ತಾಲ್ಲೂಕಿನ ಚಿನಕವಜ್ರದ ಸಿ.ಪಿ.ಮಹಾಲಕ್ಷ್ಮಿ ಬಿನ್ ಸಿ. ಪಂಪಾಪತಿ, ಪಕ್ಷೇತರ ಅಭ್ಯರ್ಥಿಗಳಾದ ಬೆಂಗಳೂರಿನ ಹೆಚ್.ಎಂ. ಉದಯಶಂಕರ್ ಬಿನ್ ಮರಿಚಿಕ್ಕಯ್ಯ, ತುರುವೇಕೆರೆ ತಾಲ್ಲೂಕು ಕಲ್ಲಕೆರೆಯ ಕಪನಿಗೌಡ ಬಿನ್ ನಂಜುಂಡೇಗೌಡ, ತಿಪಟೂರು ತಾಲ್ಲೂಕು ಹಿಪ್ಪೇತೋಪು ಗ್ರಾಮದ ಟಿ.ಎನ್.ಕುಮಾರಸ್ವಾಮಿ ಬಿನ್ ಲೇ.ಟಿ.ಕೆ ನಾರಾಯಣಪ್ಪ, ಮಧುಗಿರಿ ತಾಲ್ಲೂಕು ಹನುಮಂತಪುರದ ಹೆಚ್.ಎನ್.ನಾಗಾರ್ಜುನ, ಮಧುಗಿರಿ ತಾಲ್ಲೂಕು ಎಸ್.ಎಂ.ಕೃಷ್ಣ ಬಡಾವಣೆಯ ಜಿ.ನಾಗೇಂದ್ರ ಬಿನ್ ಗಂಗನಭೋವಿ, ತುಮಕೂರಿನ ಪ್ರಕಾಶ್ ಆರ್.ಎ.ಜೈನ್ ಬಿನ್ ಆರ್.ಎಸ್. ಅಮರೇಂದ್ರ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಭಟ್ಟರ ಹಳ್ಳಿಯ ಬಿ.ಎಸ್.ಮಲ್ಲಿಕಾರ್ಜುನ್ ಬಿನ್ ಬಿ.ಜಿ.ಸಿದ್ದರಾಮಯ್ಯ, ಕುಣಿಗಲ್ ತಾಲ್ಲೂಕು ಸೊಬಗಾನಹಳ್ಳಿ ಗ್ರಾಮದ ಎಸ್.ಪಿ. ಮುದ್ದಹನುಮೇಗೌಡ ಬಿನ್ ಲೇ. ಕರಿಗೌಡ ಉರುಫ್ ಪಾಪೇಗೌಡ, ಮಧುಗಿರಿ ತಾಲ್ಲೂಕು ಬೂರ್ಕನಹಟ್ಟಿಯ ಕೆ.ಎನ್.ರಾಜಣ್ಣ ಬಿನ್ ಲೇ.ನಂಜಪ್ಪ, ತುಮಕೂರಿನ ಡಿ.ಶರಧಿಶಯನ ಬಿನ್ ಲೇ. ದೊಡ್ಡರಂಗಯ್ಯ, ತುಮಕೂರು ತಾಲ್ಲೂಕು ಕಲ್ಕೆರೆ ಗ್ರಾಮದ ಕೆ.ವಿ.ಶ್ರೀನಿವಾಸ್ ಕಲ್ಕೆರೆ ಬಿನ್ ವೆಂಕಟಯ್ಯ, ತುಮಕೂರಿನ ಜೆ.ಕೆ.ಸಮಿ ಬಿನ್ ಮೊಹಮ್ಮದ್ ಜಾಫರ್ ಹಾಗೂ ಮಸ್ಕಲ್ ಗ್ರಾಮದ ಸಿದ್ದರಾಮೇಗೌಡ ಟಿ.ಬಿ. ಬಿನ್ ಬಸಪ್ಪ ಸೇರಿದಂತೆ 19 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುತ್ವಗೊಂಡಿವೆ ಎಂದು ಅವರು ತಿಳಿಸಿದ್ದಾರೆ.