ಯುವ ಜನತೆ ಈ ದೇಶದ ಸಂಪತ್ತು : ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಸ್ವಪ್ನ ಸತೀಶ್

ಹಿರಿಯೂರು :-

       ಯುವಜನತೆ ಈ ದೇಶದ ಸಂಪತ್ತು ಆಗಿದ್ದು, ಇಲ್ಲಿನ ನೆಲ, ಜಲ, ಪರಿಸರ, ಭಾಷೆ, ಸಂಸ್ಕೃತಿ ರಕ್ಷಣೆಗೆ ಕ್ರಿಯಾಶೀಲರಾಗಿ ದುಡಿಯುವ ಮನೋಭಾವನೆಯನ್ನು ಯುವಕರು ಬೆಳೆಸಿಕೊಳ್ಳಬೇಕೆಂದು ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಸ್ವಪ್ನಸತೀಶ್ ಹೇಳಿದರು.

         ನಗರದ ಭಾರತ್ ರೂರಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನೆಹರು ಯುವ ಕೇಂದ್ರ, ಚಿತ್ರದುರ್ಗ, ಕಳವಿಭಾಗಿ ಶ್ರೀರಂಗನಾಥಸ್ವಾಮಿ ಸಾಂಸ್ಕತಿಕ ಕಲಾಸಂಘ(ರಿ) ಸಕ್ಕರ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ಮುಂದುವರೆದ ದೇಶಗಳಾದ ಅಮೇರಿಕ, ಜಪಾನ್, ಮತ್ತು ಸಿಂಗಾಪುರಗಳಲ್ಲಿ ಯುವಕರ ಸಂಖ್ಯೆ ಕಡಿಮೆ ಇದ್ದು, ಅಭಿವೃದ್ಧಿಯ ಸಾಧನೆಯಲ್ಲಿ ಅವುಗಳು ಮುಂದಿವೆ. ಆದರೆ ನಮ್ಮ ದೇಶದಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಭಿವೃದ್ಧಿಶೀಲ ರಾಷ್ಟ್ರವಾಗಿ ಹಿಂದೆ ಉಳಿದಿದೆ. ಆದಕಾರಣ ದೇಶದ ಅಭಿವೃದ್ಧಿಗೆ ಇಂದಿನ ಯುವಜನತೆ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.

        ಸ್ವಾಮಿ ವಿವೇಕಾನಂದ ರಾಜ್ಯ ಯುವಪ್ರಶಸ್ತಿ ಪುರಸ್ಕøತರಾದ ಎಸ್.ಜಿ.ರಂಗಸ್ವಾಮಿ ಸಕ್ಕರ, ಮಾತನಾಡಿ, ದೇಶದಲ್ಲಿ ನೆಹರು ಯುವಕೇಂದ್ರ 624 ಜಿಲ್ಲಾ ಕೇಂದ್ರಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದು, ಯುವ ಜನರ ಬದುಕಿಗೆ ಸಹಕಾರ ನೀಡುತ್ತಾ ಸಾಂಸ್ಕøತಿಕ, ಕ್ರೀಡೆ, ಮನೋವಿಕಾಸ, ಸಮುದಾಯದ ಅಭಿವೃದ್ಧಿ, ವ್ಯಕ್ತಿತ್ವ ವಿಕಾಸಕ್ಕೆ ಪ್ರೇರಣೆ ಮತ್ತು ಸ್ಪೂರ್ತಿ ನೀಡುತ್ತಾ ಬಂದಿದೆ. ಯುವಕರು ಯುವ ಸಂಘಗಳನ್ನು ಸ್ಥಾಪನೆ ಮಾಡುವ ಮೂಲಕ ಸಾಂಸ್ಕøತಿಕ, ಹಾಗೂ ಕ್ರೀಡಾ, ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ನೆಹರು ಯುವಕೇಂದ್ರ ನೀಡುವ ಸಹಕಾರವನ್ನು ಪಡೆಯಬೇಕು ಎಂದು ಹೇಳಿದರು.

        ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸೌಮ್ಯಪ್ರಶಾಂತ್ ಮಾತನಾಡಿ, ಗ್ರಾಮಗಳಲ್ಲಿ ಯುವಕರು ಯುವಕ ಸಂಘಗಳನ್ನು ಕಟ್ಟಿದರೆ ಸಾಲದು, ಯಾವಾಗಲೂ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗ್ರಾಮಗಳಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ಮುಕ್ತ ಪ್ರದೇಶ, ಕೊಳಚೆ ಪ್ರದೇಶ ನಿರ್ಮೂಲನೆ, ಶೌಚಾಲಯ ನಿರ್ಮಾಣದ ಬಗ್ಗೆ ಮಹಿಳೆಯರಲ್ಲಿ ವೃದ್ಧರಲ್ಲಿ ಅರಿವು ಮೂಡಿಸಬೇಕು ಅಲ್ಲದೆ ಸರ್ಕಾರದಿಂದ ಬರುವ ಸೌಲಭ್ಯವನ್ನು ಬಳಸಿಕೊಂಡು ಗ್ರಾಮಮಟ್ಟದಲ್ಲಿ ಪ್ರತಿಯೊಬ್ಬರು ಶೌಚಾಲಯಗಳನ್ನು ನಿರ್ಮಾಣಮಾಡಿಕೊಂಡು ಗ್ರಾಮ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದರು.

        ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ರೂರಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಎಂ.ರಮೇಶ್ ವಹಿಸಿದ್ದರು. ವೇದಿಕೆಯಲ್ಲಿ ತರಬೇತಿ ಅಧಿಕಾರಿಗಳಾದ ಸೈಯದ್‍ಅಹಮದ್, ಉಪನ್ಯಾಸಕರಾದ ಹೆಚ್.ಎನ್.ಸಿಂಧು, ಟಿ.ಮಮತ, ಸೈಯದ್ ಮಹಮ್ಮದ್, ಎಂ.ಬಿ.ಲಿಂಗಪ್ಪ, ಶ್ರೀನಾಥ್ ಹಾಗೂ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link