ವಿದ್ಯಾರ್ಥಿಗಳಿಗೆ ಪೊಲೀಸ್ ಕುರಿತು ಸಚಿತ್ರ ಮಾಹಿತಿ

ದಾವಣಗೆರೆ:

         ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆಗೆ ನಗರದ ಸೋಮೇಶ್ವರ ವಿದ್ಯಾಲಯದ ಪ್ರೌಢಶಾಲೆಯ ಮಕ್ಕಳು ಭೇಟಿ ನೀಡಿ, ಪೊಲೀಸ್ ಇಲಾಖೆಯ ಕುರಿತು ಸಮಗ್ರ ಮಾಹಿತಿ ಪಡೆದರು.

         ಠಾಣೆಯ ದಪೇದಾರ ಟಿ. ಹೆಚ್.ಹನುಮಂತಪ್ಪ ಮತ್ತು ಪೇದೆ ಕೆ.ರವಿ ಅವರುಗಳು ಮಕ್ಕಳಿಗೆ ಅಪರಾಧ ತನಿಖಾ ವಿಭಾಗ ಮತ್ತು ವಿವಿಧ ರೈಫಲ್ ಗಳ ಉಪಯೋಗ ಹಾಗೂ ಬಳಸುವಾಗ ಅನುಸರಿಸುವ ವಿಧಾನ, ವಿಶೇಷವಾಗಿ ಬಾಲಪರಾಧ, ಕ್ರಮಗಳು ಮತ್ತು ಪೊಲೀಸ್ ಪದನಾಮಗಳು ಮತ್ತು ವೃತ್ತಿಯಲ್ಲಿನ ಕರ್ತವ್ಯಗಳು, ಮಕ್ಕಳಾಗಿ ಪಾಲಿಸಬೇಕಾದ ನಿಯಮಗಳನ್ನು ಸಮಗ್ರವಾಗಿ ತಿಳಿಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶಿವಾನಂದ್ ಕರೂರ್, ಸಂತೋಷ, ನಾಗರಾಜ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link