ಶಿವಮೊಗ್ಗ :
ಅನುಮಾನ ಬಂದಾಗ ಐಟಿ ದಾಳಿ ನಡೆಯುತ್ತೆ. ಅದನ್ನ ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನೋದು ತಪ್ಪು. ಸಿಎಂ ಕುಮಾರಸ್ವಾಮಿಯವರಿಗೆ ನಿನ್ನೆ ರಾತ್ರಿಯೇ ಐಟಿ ದಾಳಿ ಬಗ್ಗೆ ಮಾಹಿತಿಯಿತ್ತು ಎಂದಾದರೆ ಅವರು ಈಗಾಗಲೇ ಬಂದೋಬಸ್ತ್ ಮಾಡಿಕೊಂಡಿರುತ್ತಾರೆ ಎಂದು ಬಿ.ಎಸ್. ಯಡಿಯೂರಪ್ಪ ಟೀಕಿಸಿದ್ದಾರೆ.
ಅಧಿಕಾರಿಗಳು ತಮ್ಮ ಕೆಲಸವೇನೋ ಅದನ್ನು ಮಾಡುತ್ತಾರೆ. ಪ್ರಾಮಾಣಿಕರಾಗಿದ್ದವರಿಗೆ ಐಟಿ ದಾಳಿಯ ಬಗ್ಗೆ ಭಯವೇಕೆ? ಐಟಿ ಅಧಿಕಾರಿಗಳ ಬಗ್ಗೆ ಹಗುರ ಮಾತು ಸರಿಯಲ್ಲ ಎಂದು ಹೇಳಿದ್ದಾರೆ.
ಐಟಿ ಅಧಿಕಾರಿಗಳಿಗೆ ಅನುಮಾನ ಬಂದ್ರೆ ಅವರೇ ನೇರವಾಗಿ ದಾಳಿ ಮಾಡಿ ತನಿಖೆ ಮಾಡುತ್ತಾರೆ. ನಿನ್ನೆ ಸಿಎಂ ಕುಮಾರಸ್ವಾಮಿ ಹೇಳಿದ್ದನ್ನು ಕೇಳಿದ್ದೇನೆ. ನಿನ್ನೆ ರಾತ್ರಿಯೇ ಅವರಿಗೆ ಮಾಹಿತಿ ಇತ್ತು ಅನ್ನೋದಾದ್ರೆ ಅವರು ಮೊದಲೇ ಬಂದೋಬಸ್ತ್ ಮಾಡಿಕೊಂಡಿದ್ದಾರೆ ಅನ್ನೋ ಅನುಮಾನವಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ